Dec 6, 2020, 12:23 PM IST
ಬೆಂಗಳೂರು (ಡಿ. 06): ರಾತ್ರಿ ಬೆಳಗಾಗೋದ್ರೊಳಗೆ ಕೋಟ್ಯಾಧೀಶರನ್ನಾಗಿ ಮಾಡುತ್ತಂತೆ ಈ ಗ್ಯಾಂಗ್. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮವೊಂದರಲ್ಲಿ ಈ ಗ್ಯಾಂಗ್ ಕೆಲಸ ಮಾಡುತ್ತಿದೆ. ಹಲವಾರು ವರ್ಷಗಳಿಂದ ಜನರನ್ನು ವಂಚಿಸಿಕೊಂಡು ಬರುತ್ತಿದೆ. ಇವರ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡ ಕವರ್ ಸ್ಟೋರಿ ತಂಡ ಕಾರ್ಯಾಚರಣೆಗೆ ಇಳಿಯಿತು. ಈ ಗ್ಯಾಂಗ್‌ನ ಮುತ್ತಣ್ಣ ಎಂಬ ವ್ಯಕ್ತಿಯನ್ನು ಭೇಟಿ ಮಾಡಿ ನಾವೂ ಕೋಟ್ಯಾಧೀಶರಾಗಬೇಕೆಂಬ ಬೇಡಿಕೆ ಇಟ್ಟೆವು. ಆತ ಹಳೆಯ ನೋಟುಗಳನ್ನು ಕೊಡಿ, ನಿಮ್ಮನ್ನು ಕೋಟ್ಯಾಧೀಶರನ್ನಾಗಿ ಮಾಡುತ್ತೇವೆ ಎನ್ನುತ್ತಾನೆ. ತನ್ನ ಚಾಲಾಕಿ ಕೆಲಸ ಆರಂಭಿಸುತ್ತಾನೆ. ಹೇಗಿತ್ತು ಕಾರ್ಯಾಚರಣೆ? ನೋಡೋಣ ಬನ್ನಿ..!
ಹಣದ ಮಳೆ ಬರಿಸುವುದಾಗಿ ವಂಚಿಸುತ್ತಿದ್ದ ವ್ಯಕ್ತಿ ಅರೆಸ್ಟ್! ಇದು ಕವರ್ ಸ್ಟೋರಿ ಇಂಪ್ಯಾಕ್ಟ್!