ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

Published : Jan 08, 2025, 11:45 AM IST

ಡಿ.ಕೆ ಸುರೇಶ್​ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ.  ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್​​ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ. 

ಬೆಂಗಳೂರು(ಜ.08): ಡಿಕೆ ಬ್ರದರ್ಸ್ ತಂಗಿ ಎಂದು ಹೇಳಿಕೊಂಡು ವಂಚಿಸಿದ್ದ ಐಶ್ವರ್ಯ ಗೌಡ ವಂಚನೆ ಕಹಾನಿ ಬಗೆದಷ್ಟು ಬಯಲಾಗ್ತಿದೆ. ಈಕೆಯನ್ನ ನಂಬಿ ಕೋಟಿ ಕೋಟಿ ಹಣ ನೀಡಿದವರು ಕಂಗಾಲಾಗಿದ್ದಾರೆ. ಸದ್ಯ ಮಾಜಿ ಮಿನಿಸ್ಟರ್​ಗೂ ಈ ಚಾಲಾಕಿ ನಂಟಿರೋದು ಬೆಳಕಿಗೆ ಬಂದಿದೆ. 

ಐಶ್ವರ್ಯ ಗೌಡ.. ಬ್ರ್ಯಾಂಡೆಂಡ್​​​ ಬಟ್ಟೆ ತೊಟ್ಟು..ಹೈ-ಫೈ ಕಾರಿನಲ್ಲಿ ಓಡಾಡ್ತ ಅದೆಷ್ಟು ಜನರಿಗೆ ಈ ವಂಚಕಿ ಪಂಗನಾಮ ಹಾಕಿದ್ದಾಳೋ ಗೊತ್ತಿಲ್ಲ. ಒಂದರ ನಂತರ ಮತ್ತೊಂದರಂತೆ ಐಶ್ವರ್ಯ ವಂಚನೆ ಪ್ರಕರಣಗಳು ಬೆಳಕಿಗೆ ಬರ್ತಿವೆ. 
ಡಿ.ಕೆ ಸುರೇಶ್​ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ.  ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್​​ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಮಂಜುಳಾಗೆ ಐಶ್ವರ್ಯ ಗೌಡ ಪರಿಚಯವಾಗಿದೆ.  ಐಶ್ವರ್ಯ ತಾನು ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡಿದ್ದಳು. ಗೋಲ್ಡ್ ಬ್ಯುಸಿನೆಸ್, ರಿಯಲ್​ ಎಸ್ಟೇಟ್​​ ಮಾಡ್ತಿರೋದಾಗಿ ಕಥೆ ಕಟ್ಟಿದ್ದ ಚಾಲಾಕಿ, ಹೂಡಿಕೆ ಮಾಡಿ ಅಂತಾ ಹಣ ಪೀಕಿದ್ದಳು. 2.5 ಕೋಟಿ ಬೆಲೆ ಬಾಳುವ 2 ಕೆಜಿ 350 ಗ್ರಾಂ ಚಿನ್ನ ಪಡೆದುಕೊಂಡಿದ್ದಳು. ನಗದು ಸೇರಿದಂತೆ ವೈದ್ಯೆ ಮಂಜುಳಾಗೆ ಒಟ್ಟು 5 ಕೋಟಿ ರೂ. ವಂಚಿಸಲಾಗಿದೆ. 

News Hour: ಕಾಂಗ್ರೆಸ್‌ನಲ್ಲಿ ಈಗ ‘ಪವರ್​’ ಫೈಟ್..!

ವಂಚನೆ ಮಾಡಿರೋದು ಮಾತ್ರವಲ್ಲ. ಪೊಲೀಸರಿಗೆ ಏನಾದ್ರೂ ದೂರು ನೀಡಿದ್ರೆ ಅಷ್ಟೇ ಅಂತಾ ವೈದ್ಯೆ ಮಂಜುಳಾಗೆ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ RR ನಗರ ಠಾಣೆಯಲ್ಲಿ ಐಶ್ವರ್ಯ ವಿರುದ್ಧ FIR ದಾಖಲಾಗಿದೆ.  
ಮಾಜಿ ಸಚಿವ ವಿನಯ್​ ಕುಲಕರ್ಣಿಗೂ ಐಶ್ವರ್ಯ ಗೌಡ ನಂಟಿರುವುದು ಬೆಳಕಿಗೆ ಬಂದಿದೆ. ವಂಚಕಿ ಐಶ್ವರ್ಯ ಪತಿ ಹೆಸರಿನಲ್ಲಿರುವ ಕಾರನ್ನ ವಿನಯ್​ ಕುಲಕರ್ಣಿ ಬಳಸುತ್ತಿದ್ದು, RR ನಗರ ಪೊಲೀಸರ ತನಿಖೆಯಲ್ಲಿ ಈ ಸಂಗತಿ ಬಯಲಾಗಿದೆ. ಅಷ್ಟು ಮಾತ್ರವಲ್ಲ ಯೋಗೀಶ್​ಗೌಡ ಕೊಲೆ ಪ್ರಕರಣದ A5 ಆರೋಪಿ ಅಶ್ವತ್ಥ್​ ಗೌಡ, ವಂಚಕಿ ಐಶ್ವರ್ಯ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದಾನೆ. ಹೀಗಾಗಿ ವಂಚನೆ ಕೇಸ್​ನಲ್ಲಿ ವಿನಯ್​ ಕುಲಕರ್ಣಿಗೂ ತನಿಖೆ ಬಿಸಿ ತಟ್ಟುವ ಸಾಧ್ಯತೆಯಿದೆ. 

ಡಿ.ಕೆ ಸುರೇಶ್​ ಹೆಸರಲ್ಲಿ ಐಶ್ವರ್ಯ ವಂಚನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿದ್ದು, ಯಾವ ಐಶ್ವರ್ಯ ಗೌಡನೂ ಗೊತ್ತಿಲ್ಲ ಅಂತಾ ಸ್ಪಷ್ಟನೆ ನೀಡಿದ್ರು. ಚಿನ್ನಾಭರಣದ ಉದ್ಯಮಿಯಂತೆ ಬಿಲ್ಡಪ್​​ ಕೊಡ್ತಿದ್ದ ಐಶ್ವರ್ಯ ತನ್ನ ಬಣ್ಣದ ಮಾತಿನಿಂದಲೇ ಜನರಿಗೆ ಮಕ್ಮಲ್​ ಟೋಪಿ ಹಾಕಿದ್ದಾಳೆ. ಪ್ರಕರಣದ ತನಿಖೆ ನಡೆದಂತೆಲ್ಲ ದೊಡ್ಡ ದೊಡ್ಡವರ ಹೆಸರು ಮುನ್ನಲೆಗೆ ಬರ್ತಿವೆ. ವಂಚನೆ ಉರಳು ಇನ್ನು ಯ್ಯಾರ ಕೊರಳಿಗೆ ಸುತ್ತಿಕೊಳ್ಳುತ್ತೋ ಕಾದು ನೋಡಬೇಕಿದೆ. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more