ಸಾಲಬಾಧೆ: ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಯತ್ನ, ಮಹಿಳೆ ಸಾವು, 6 ಮಂದಿ ಚಿಂತಾಜನಕ

ಸಾಲಬಾಧೆ: ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಯತ್ನ, ಮಹಿಳೆ ಸಾವು, 6 ಮಂದಿ ಚಿಂತಾಜನಕ

Published : Feb 03, 2023, 11:05 AM IST

ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಮಂದಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಅಸ್ವಸ್ಥರಾಗಿರುವ 6 ಮಂದಿಯನ್ನು ಮಂಡ್ಯದ ವಿಮ್ಸ್‌ಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. 

ರಾಮನಗರ (ಫೆ.03): ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಮಂದಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಅಸ್ವಸ್ಥರಾಗಿರುವ 6 ಮಂದಿಯನ್ನು ಮಂಡ್ಯದ ವಿಮ್ಸ್‌ಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮದ ಮಂಗಳಮ್ಮ (28) ಮೃತ ಮಹಿಳೆ. ಆಕೆಯ ಪತಿ ರಾಜು (31), ಆಕೆಯ ತಾಯಿ ಸೊಮ್ಮಪುರದಮ್ಮ (48), ಮಕ್ಕಳಾದ ಆಕಾಶ್‌ (9), ಕೃಷ್ಣ (13), ಮಂಗಳಮ್ಮನ ಸಹೋದರಿ ಸವಿತಾ (24), ಸವಿತಾ ಪುತ್ರಿ ದರ್ಶಿನಿ (4) ಅಸ್ವಸ್ಥರಾದವರು. ಬೆಂಗಳೂರಿನ ಸುಬ್ರಪ್ಪನಪಾಳ್ಯದಲ್ಲಿ ವಾಸವಾಗಿದ್ದ ರಾಜು, ಕೂಲಿ ಕಾರ್ಮಿಕನಾಗಿದ್ದು, 11 ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಿಕೊಂಡಿದ್ದರು. ಇತ್ತೀಚೆಗೆ ಸಾಲಗಾರರ ಕಾಟ ಹೆಚ್ಚಾಗಿತ್ತು. 

ಸಾಲಗಾರರಿಗೆ ಹೆದರಿ ಸುಬ್ರಪ್ಪನಪಾಳ್ಯ ಬಿಟ್ಟು ರಾಮನಗರದ ದೊಡ್ಡ ಮಣ್ಣುಗುಡ್ಡೆ ಗ್ರಾಮದಲ್ಲಿರುವ ಸೋದರತ್ತೆ ಮನೆಯಲ್ಲಿ ವಾಸವಿದ್ದರು. ಅಲ್ಲೂ ಸಾಲಕ್ಕೆ ಪೀಡಿಸುತ್ತಿದ್ದರಿಂದ ಬೇಸತ್ತು ಊಟಕ್ಕೆ ಇಲಿ ಪಾಷಾಣ ಬೆರೆಸಿದ್ದ. ಊಟ ಮಾಡಿ ಮಂಗಳಮ್ಮ ಮನೆಯಲ್ಲೇ ಮೃತಪಟ್ಟರು. ಉಳಿದವರು ಅಸ್ವಸ್ಥರಾದರು. ಮಧ್ಯಾಹ್ನ 2.30ರ ವೇಳೆ ಎಲ್ಲರೂ ಊಟ ಮಾಡಿದ್ದರು. ಊಟದ ಬಳಿಕ ಸಕ್ಕರೆ ಅಚ್ಚು, ಬಾಳೆ ಹಣ್ಣು ಸೇವಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದು, ಮಂಗಳಮ್ಮ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ನೆರೆಹೊರೆಯವರು ತಕ್ಷಣವೇ ಅವರೆಲ್ಲರನ್ನೂ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ಗೆ ದಾಖಲು ಮಾಡಲಾಯಿತು.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more