Aug 24, 2022, 4:10 PM IST
ಬೆಂಗಳೂರು, (ಆಗಸ್ಟ್.24):ಕರ್ನಾಟಕದಲ್ಲಿ ಮತ್ತೆ ಪರ್ಸೆಂಟೇಜ್ ಆರೋಪ ಮತ್ತೊಂದು ತಿರುವುಪಡೆದುಕೊಂಡಿದೆ.
40 ಪರ್ಸೆಂಟ್ ಇದ್ದ ಕಮಿಷನ್‌ನಲ್ಲಿ ಏರಿಕೆಯಾಗಿದೆ. ಈ ಮೊದಲು ಇದ್ದ 40 ಪರ್ಸೆಂಟ್ ಈಗ ಅದು 50ಕ್ಕೆ ಏರಿದೆ.
ಸರ್ಕಾರ ಕಟ್ಟಿಹಾಕಲು ಸಿದ್ದರಾಮಯ್ಯ ಮತ್ತೊಂದು ಅಸ್ತ್ರ, ಹಳೇ ಆರೋಪಕ್ಕೆ ಮರುಜೀವ!
ಹೌದು..ರಾಜ್ಯದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸುತ್ತಿದೆ ಕಮಿಷನ್ ಬಾಂಬ್. ರಾಜ್ಯ ಸರ್ಕಾರ ಮಾತ್ರವಲ್ಲ, ಬಿಬಿಎಂಪಿ ಕೂಡ ಕಮಿಷನ್ ಪಡೆಯುತ್ತಿದೆ. ರಾಜ್ಯ ಸರ್ಕಾರ 40% ಕಮಿಷನ್ ಪಡೆಯುತ್ತಿದ್ದರೆ, ಬಿಬಿಎಂಪಿ 50% ಕಮಿಷನ್ ವಸೂಲಿ ಮಾಡುತ್ತಿದೆ ಎಂದು ಮೂರು ಸಂಘಗಳು ಗಂಭೀರ ಆರೋಪ ಮಾಡಿವೆ.