Drugs Party ಬೆಂಗಳೂರು ಡ್ರಗ್ಸ್ ಪಾರ್ಟಿಯಲ್ಲಿ 150 ಸೆಲೆಬ್ರಿಟಿಗಳು ಭಾಗಿ?

Jun 14, 2022, 12:40 PM IST

ಬೆಂಗಳೂರು, (ಜೂನ್.14): ರಾಜ್ಯ ರಾಜಧಾನಿ ಬೆಂಗಳೂರು  ದಿನದಿನಕ್ಕೂ ಬೆಳೆಯುತ್ತಿದೆ. ಉದ್ಯಾನನಗರಿ, ಸಿಲಿಕಾನ್ ಸಿಟಿ ಅಂತೆಲ್ಲ ಕರೆಸಿಕೊಂಡಿದ್ದ ಬೆಂಗಳೂರು ಡ್ರಗ್ಸ್ ಪಾರ್ಟಿ ಪ್ರಿಯರ ಸ್ವರ್ಗವಾಗ್ತಿದೆ. 

Drugs Case: ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಬೆಂಗಳೂರಿನಲ್ಲಿ ಅರೆಸ್ಟ್‌

ಹೌದ...ಬೆಂಗಳೂರು ನಗರ ಹಾಗೂ ವರವಲಯದ ಸ್ಟಾರ್ ಹೋಟೆಲ್‌ ಹಾಗೂ ಫಾರ್ಮ್‌ ಹೌಸ್‌ಗಳಲ್ಲಿ ಡ್ರಗ್ಸ್ ಪಾರ್ಟಿಗಳು, ರೇವ್‌ ಪಾರ್ಟಿಗಳು ನಡೆಯುತ್ತವೆ. ಮೊನ್ನೇ ದಿ ಪಾರ್ಕ್ ಹೋಟೆಲ್‌ನಲ್ಲಿ ನಡೆದ ಡ್ರಗ್ಸ್ ಪಾರ್ಟಿಯೇ ಇದಕ್ಕೆ ಸಾಕ್ಷಿ. ಈ ಬೆಂಗಳೂರು ರೇವ್ ಪಾರ್ಟಿಯಲ್ಲಿ 150 ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.