ಒಂದು ಕಾಲದಲ್ಲಿ ಒಂದು ಸರಣಿಯ ಆಯ್ಕೆಯ ವೇಳೆ ಪ್ರತಿಭಾನ್ವಿತರಿಗೆ ಮಣೆ ಹಾಕಲಾಗುತ್ತಿತ್ತು. ಆಟಗಾರರ ಆಯ್ಕೆ ವಿಚಾರದಲ್ಲಿ ಬಿಸಿಸಿೖ ಆಯ್ಕೆ ಸಮಿತಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿತ್ತು. ಆದರೆ ಕ್ರಮೇಣ ಎಲ್ಲವೂ ಬದಲಾಗಿ ಹೋಗಿತ್ತು.
ಬೆಂಗಳೂರು[ನ.26] ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದು ಹೆಸರಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ[ಬಿಸಿಸಿಐ] ಆಯ್ಕೆ ಸಮಿತಿ ವಿರುದ್ಧ ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹರಿಹಾಯ್ದಿದ್ದಾರೆ.
ಹೌದು, ಒಂದು ಕಾಲದಲ್ಲಿ ಒಂದು ಸರಣಿಯ ಆಯ್ಕೆಯ ವೇಳೆ ಪ್ರತಿಭಾನ್ವಿತರಿಗೆ ಮಣೆ ಹಾಕಲಾಗುತ್ತಿತ್ತು. ಆಟಗಾರರ ಆಯ್ಕೆ ವಿಚಾರದಲ್ಲಿ ಬಿಸಿಸಿೖ ಆಯ್ಕೆ ಸಮಿತಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿತ್ತು. ಆದರೆ ಕ್ರಮೇಣ ಎಲ್ಲವೂ ಬದಲಾಗಿ ಹೋಗಿತ್ತು.
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಆಯ್ಕೆ ಸಮಿತಿಗೆ ಚುರಕು ಮುಟ್ಟಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ಈ ಕುರಿತಾಗಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ.