ಟೀಂ ಇಂಡಿಯಾದ ಸವ್ಯಸಾಚಿ, ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಜೀವನಾಧಾರಿತ ಸದ್ಯದಲ್ಲೇ ಸೆಟ್ಟೇರಲಿದೆ. ಮೈದಾನದಲ್ಲಿ ಕೆಚ್ಚೆದೆಯ ಹೋರಾಟದ ಮೂಲಕ ಹಲವಾರು ಸ್ಮರಣೀಯ ಗೆಲುವು ತಂದಿಟ್ಟಿರುವ ಯುವಿ, ಕ್ಯಾನ್ಸರ್ ವಿರುದ್ಧ ಗೆದ್ದು ಹಲವರ ಪಾಲಿಗೆ ಸ್ಪೂರ್ತಿಯ ಚಿಲುಮೆ ಎನಿಸಿದ್ದಾರೆ.
ಮುಂಬೈ(ಮಾ.18): ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಕ್ರೀಡಾಪಟುಗಳ ಬಯೋಪಿಕ್ ತೆರೆಗೆ ಅಪ್ಪಳಿಸುವುದು ಸರ್ವೇಸಾಮಾನ್ಯವಾಗಿದೆ. ಈಗಾಗಲೇ ಸಚಿನ್ ಎ ಬಿಲಿಯನ್ ಡ್ರೀಮ್, ಎಂ. ಎಸ್. ಧೋನಿ ಅನ್‌ಟೋಲ್ಡ್ ಸ್ಟೋರಿ ತೆರೆಗೆ ಅಪ್ಪಳಿಸಿ ಪ್ರೇಕ್ಷಕರ ಮನಸೂರೆಗೊಂಡಿವೆ.
ಇದೀಗ ಟೀಂ ಇಂಡಿಯಾದ ಸವ್ಯಸಾಚಿ, ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಜೀವನಾಧಾರಿತ ಸದ್ಯದಲ್ಲೇ ಸೆಟ್ಟೇರಲಿದೆ. ಮೈದಾನದಲ್ಲಿ ಕೆಚ್ಚೆದೆಯ ಹೋರಾಟದ ಮೂಲಕ ಹಲವಾರು ಸ್ಮರಣೀಯ ಗೆಲುವು ತಂದಿಟ್ಟಿರುವ ಯುವಿ, ಕ್ಯಾನ್ಸರ್ ವಿರುದ್ಧ ಗೆದ್ದು ಹಲವರ ಪಾಲಿಗೆ ಸ್ಪೂರ್ತಿಯ ಚಿಲುಮೆ ಎನಿಸಿದ್ದಾರೆ.
ಇದೀಗ ಯುವಿ ಸಿನೆಮಾ ಸೆಟ್ಟೇರಲಿದ್ದು, ಯಾರು ಯುವಿ ಪಾತ್ರ ನಿಭಾಯಿಸಲಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.