ಕೊರೋನಾ ವಿರುದ್ಧ ಸೆಣಸಲು ಪ್ರಧಾನಿ ಮೋದಿ ದೇಶದ ಜನತೆಗೆ ತಮ್ಮ ಕೈಲಾದ ಹಣದ ನೆರವು ನೀಡಲು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಕ್ರೀಡಾ ಲೋಕದ ಹಲವು ಮಂದಿ ಮೋದಿ ಕರೆಗೆ ಓಗೊಟ್ಟು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ನವದೆಹಲಿ(ಏ.01): ಕೊರೋನಾ ವೈರಸ್ ದೇಶಾದ್ಯಂತ ಹಬ್ಬುತ್ತಿದ್ದು, ಸದ್ಯ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. 21 ದಿನಗಳ ಕಾಲ ಮನೆಯಲ್ಲೇ ಉಳಿಯುವ ಮೂಲಕ ಕೊರೋನಾ ವಿರುದ್ಧ ಜನರು ಹೋರಾಡುತ್ತಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಸೆಣಸಲು ಪ್ರಧಾನಿ ಮೋದಿ ದೇಶದ ಜನತೆಗೆ ತಮ್ಮ ಕೈಲಾದ ಹಣದ ನೆರವು ನೀಡಲು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಕ್ರೀಡಾ ಲೋಕದ ಹಲವು ಮಂದಿ ಮೋದಿ ಕರೆಗೆ ಓಗೊಟ್ಟು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇನ್ನು ಕೊರೋನಾ ಬಂದವಾಗಿನಿಂದ ದೇಶದ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಇದೀಗ ತಾವು ಬರೀ ಮಾತನಾಡುವುದಿಲ್ಲ, ಅಗತ್ಯವಿದ್ದಾಗ ದೇಶ ಸೇವೆಗೂ ರೆಡಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಜೊತೆಗೆ ದೇಶದ ಜನರ ಹೃದಯ ಗೆಲ್ಲುವಂತಹ ಕೆಲಸ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.