ರೋಹಿತ್ ಶರ್ಮಾ ಹಾಗೂ ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲ್ಲಾರ್ಡ್ ನಡುವಿನ ಸ್ನೇಹವನ್ನೇ ಬಳಸಿಕೊಂಡು ಪಂದ್ಯ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಫೋರ್ಟ್ಸ್ ನೆಟ್’ವರ್ಕ್ ಪ್ರೋಮೋ ಮಾಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಮುಂಬೈ ಇಂಡಿಯನ್ಸ್ ತಂಡದ ಸಹ ಸದಸ್ಯ ಪೊಲ್ಲಾರ್ಡ್ ಕಾಲೆಳೆದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಬೆಂಗಳೂರು[ನ.30]: ಭಾರತ-ವೆಸ್ಟ್ ಇಂಡೀಸ್ ನಡುವಿನ ಸೀಮಿತ ಓವರ್’ಗಳ ಸರಣಿ ಡಿಸೆಂಬರ್ 06ರಿಂದ ಆರಂಭವಾಗಲಿದ್ದು, ಹೊಡಿಬಡಿ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಈ ನಡುವೆ ರೋಹಿತ್ ಶರ್ಮಾ ಹಾಗೂ ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲ್ಲಾರ್ಡ್ ನಡುವಿನ ಸ್ನೇಹವನ್ನೇ ಬಳಸಿಕೊಂಡು ಪಂದ್ಯ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಫೋರ್ಟ್ಸ್ ನೆಟ್’ವರ್ಕ್ ಪ್ರೋಮೋ ಮಾಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಮುಂಬೈ ಇಂಡಿಯನ್ಸ್ ತಂಡದ ಸಹ ಸದಸ್ಯ ಪೊಲ್ಲಾರ್ಡ್ ಕಾಲೆಳೆದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಇದೀಗ ಆ ವಿಡಿಯೋ ನೋಡಿ ಪೊಲ್ಲಾರ್ಡ್ ಕೆಂಡಾಮಂಡಲವಾಗಿದ್ದಾರೆ. ಜೊತೆಗೆ ರೋಹಿತ್ ವಿರುದ್ಧ ವಿಂಡೀಸ್ ನಾಯಕ ಸೇಡು ತೀರಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...