ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು

ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು

Published : Sep 18, 2025, 07:06 PM IST
ಭಾರತೀಯ ಆಟಗಾರರೊಂದಿಗೆ ಹಸ್ತಲಾಘವ ಮಾಡಬಾರದೆಂದ ಮ್ಯಾಚ್ ರೆಫ್ರಿಯನ್ನು ಅಮಾನತುಗೊಳಿಸುವಂತೆ ಪಾಕಿಸ್ತಾನ ಐಸಿಸಿಗೆ ಆಗ್ರಹಿಸಿತ್ತು. ಯುಎಇ ವಿರುದ್ಧದ ಪಂದ್ಯ ಬಹಿಷ್ಕಾರದ ಬೆದರಿಕೆ ಹಾಕಿದರೂ, ಐಸಿಸಿಯ 140 ಕೋಟಿ ರೂ. ನಷ್ಟದ ಎಚ್ಚರಿಕೆಗೆ ಮಣಿದು ಪಾಕ್ ಅನಿವಾರ್ಯವಾಗಿ ಕಣಕ್ಕಿಳಿಯಿತು.

ದುಬೈನಲ್ಲಿ ಪಾಕಿಸ್ತಾನ-ಯುಎಇ ನಡುವಿನ ಪಂದ್ಯಕ್ಕೂ ಮೊದಲು ಹೈಡ್ರಾಮವೇ ನಡೆದಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮುಖಭಂಗವಾಗಿದೆ. ಭಾರತ-ಪಾಕಿಸ್ತಾನ ನಡುವಿನ ಮ್ಯಾಚ್ ಟೈಮ್‌ನಲ್ಲಿ ಭಾರತೀಯ ಆಟಗಾರರ ಜತೆ ಶೇಕ್ ಹ್ಯಾಂಡ್ ಮಾಡಬಾರದು ಅಂತ ಪಾಕ್ ಕ್ಯಾಪ್ಟನ್‌ಗೆ ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಹೇಳಿದ್ರು. ಹೀಗಾಗಿ ಅವರನ್ನು ಸಸ್ಪೆಂಡ್ ಮಾಡಿ ಎಂದು ಐಸಿಸಿಗೆ ಪಾಕಿಸ್ತಾನ ಆಗ್ರಹಿಸಿತ್ತು. ಒಂದ್ವೇಳೆ ರೆಫ್ರಿ ಸಸ್ಪೆಂಡ್ ಮಾಡದಿದ್ರೆ, ನಾವು ಯುಎಇ ಎದುರು ಮ್ಯಾಚ್ ಬಾಯ್ಕಾಟ್ ಮಾಡ್ತೀವಿ ಅಂತ ಪಾಕ್ ಬೆದರಿಸಿತ್ತು.

ಪಾಕಿಸ್ತಾನ ಸತತ ಎರಡನೇ ಬಾರಿ ಮ್ಯಾಚ್‌ ರೆಫ್ರಿಯನ್ನು ವಜಾಗೊಳಿಸಬೇಕು ಎಂದು ಐಸಿಸಿಗೆ ಪತ್ರಬರೆದಿತ್ತು. ಆದರೆ ಪಾಕ್‌ ಮನವಿಗೆ ಐಸಿಸಿ ಕ್ಯಾರೇ ಅಂದಿಲ್ಲ. ಇದಾದ ನಂತ್ರ ಪಾಕಿಸ್ತಾನ ಕೊನೆಯ ಪಕ್ಷ ತಮ್ಮ ಮ್ಯಾಚ್ ಮಟ್ಟಿಗಾದರೂ ಮ್ಯಾಚ್ ರೆಫ್ರಿಯನ್ನು ಬದಲಿಸಿ ಎಂದು ಐಸಿಸಿ ಬಳಿ ಬೇಡಿಕೊಂಡಿತ್ತು. ಈ ಬೇಡಿಕೆಗೂ ಐಸಿಸಿ ಸೊಪ್ಪು ಹಾಕಿಲ್ಲ.

ಒಂದು ವೇಳೆ ಏಕಾಏಕಿ ಮ್ಯಾಚ್ ಬಹಿಷ್ಕರಿಸಿದರೆ, ಪಾಕ್‌ಗೆ ಸುಮಾರು 140 ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ಐಸಿಸಿ ಪಾಕ್‌ಗೆ ವಾರ್ನಿಂಗ್ ಕೊಡುತ್ತಿದ್ದಂತೆ ಪಾಕ್ ಕಂಗಾಲಾಗಿ ಹೋಗಿದೆ. ಕೊನೆಗೆ ವಿಧಿಯಿಲ್ಲದೇ, ಯುಎಇ ಎದುರು ಪಾಕ್ ಕಣಕ್ಕಿಳಿಯಲು ತೀರ್ಮಾನಿಸಿತು. 

Read more