ಕಳೆದ ಕೆಲ ತಿಂಗಳುಗಳ ಹಿಂದೆ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ರಾಹುಲ್, ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವೆಲ್ಲಿಂಗ್ಟನ್(ಫೆ.04): ವಿದೇಶಿ ಪ್ರವಾಸ ಕೆಲ ಕ್ರಿಕೆಟಿಗರ ಪಾಲಿಗೆ ಕರಾಳದಿನಗಳಾದರೆ, ಮತ್ತೆ ಕೆಲವರಿಗೆ ಸ್ಮರಣೀಯ ಕ್ಷಣಗಳಾಗಿ ಮಾರ್ಪಡುತ್ತವೆ. ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಪ್ರವಾಸ ಕೆ.ಎಲ್ ರಾಹುಲ್ ಬದುಕನ್ನೇ ಬದಲಿಸಿದೆ.
ಹೌದು, ಕಳೆದ ಕೆಲ ತಿಂಗಳುಗಳ ಹಿಂದೆ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ರಾಹುಲ್, ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೆ.ಎಲ್ ರಾಹುಲ್ 5 ಪಂದ್ಯಗಳ ಟಿ20 ಸರಣಿಯಲ್ಲಿ 224 ರನ್ ಬಾರಿಸಿದ್ದಾರೆ. ಇನ್ನು ವಿಕೆಟ್ ಕೀಪಿಂಗ್‌ನಲ್ಲೂ ಸೈ ಎನಿಸಿಕೊಂಡಿದ್ದ ರಾಹುಲ್ 4 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ರಾಹುಲ್ ಪ್ರದರ್ಶನದ ಒಂದು ಕ್ವಿಕ್ ಝಲಕ್ ಇಲ್ಲಿದೆ ನೋಡಿ..