
ಮೈಸೂರು: ಕರ್ನಾಟಕದಲ್ಲಿ ಚೊಚ್ಚಲ ಮಹಾರಾಣಿ ಟ್ರೋಫಿ ಮಹಿಳಾ ಕ್ರಿಕೆಟ್ ಟೂರ್ನಿ ಆಯೋಜನೆಗೊಂಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಟಿ20 ಪಂದ್ಯಗಳಿಗೆ ಮಹಿಳಾ ತಂಡಗಳನ್ನು ಪ್ರಕಟಿಸಲಾಗಿದೆ. ಮೈಸೂರು ವಾರಿಯರ್ಸ್ ತಂಡವು ಶುಭಾ ಸತೀಷ್ ಅವರನ್ನು ನಾಯಕಿಯನ್ನಾಗಿ ಘೋಷಿಸಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಶುಭಾ ಸತೀಶ್ ನಾಯಕತ್ವದಡಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಮಹಾರಾಣಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಡ್ರ್ಯಾಗನ್ಸ್, ಹುಬ್ಬಳ್ಳಿ ಟೈಗರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಟೂರ್ನಿಯಲ್ಲಿ ಫೈನಲ್ ಸೇರಿದಂತೆ 13 ಪಂದ್ಯಗಳು ನಡೆಯಲಿದ್ದು, ಆಗಸ್ಟ್ 10ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಎಲ್ಲಾ ಪಂದ್ಯಗಳನ್ನು ಫ್ಯಾನ್‌ಕೋಡ್ ಅಪ್ಲಿಕೇಷನ್ ಹಾಗೂ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರಗೊಳ್ಳಲಿವೆ. ಪಂದ್ಯಗಳನ್ನು ವೀಕ್ಷಿಸಲು ಫ್ಯಾನ್‌ಕೋಡ್‌ನ ಚಂದಾದಾರರಾಗಿರಬೇಕು.