ರಾಹುಲ್‌ಗೆ 5ನೇ ಕ್ರಮಾಂಕ: ಕೊಹ್ಲಿ ನಿರ್ಣಯ ಸರಿನಾ, ತಪ್ಪಾ?

Feb 7, 2020, 2:54 PM IST

ವೆಲ್ಲಿಂಗ್ಟನ್(ಫೆ.07): ವೃತ್ತಿಜೀವನದ ಅದ್ಭುತ ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರನ್ ಬೇಟೆ ಮುಂದುವರೆಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ದಾಖಲೆಯ 224 ರನ್ ಚಚ್ಚಿದ್ದ ರಾಹುಲ್, ಏಕದಿನ ಕ್ರಿಕೆಟ್‌ನಲ್ಲಿ ಫಿನೀಶರ್ ಆಗಿ ಸೈ ಎನಿಸಿಕೊಂಡರು.

ಕೋಚ್‌ಗೆ ಹಿಗ್ಗಾಮುಗ್ಗಾ ಬಾರಿಸಿದ ಚಹಲ್...!

ಸಾಮಾನ್ಯವಾಗಿ ಆರಂಭಿಕನಾಗಿ ಕಣಕ್ಕಿಳಿಯುವ ರಾಹುಲ್, ಏಕದಿನ ಕ್ರಿಕೆಟ್‌ನಲ್ಲಿ ಕಿವೀಸ್‌ ವಿರುದ್ದ 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿ ಮಿಂಚಿದರು. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲೂ ರಾಹುಲ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅರ್ಧಶತಕ ಬಾರಿಸಿದ್ದರು.

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಸಮಸ್ಯೆಗೆ ಮುಕ್ತಿ!

ನಾಯಕ ಕೊಹ್ಲಿಯ ಈ ತೀರ್ಮಾನ ಕೈಹಿಡಿದಿದೆಯಾದರೂ, ಕ್ರಿಕೆಟ್ ಪಂಡಿತರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಕೊಹ್ಲಿಯ ಈ ತೀರ್ಮಾನ ಸರಿಯೋ, ತಪ್ಪೋ ಎನ್ನುವ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...