ಈ ಬಾರಿ ಮಿನಿ ಹರಾಜು ಆಗಿರುವುದರಿಂದ ಎಲ್ಲಾ 8 ಫ್ರಾಂಚೈಸಿಗಳು ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ ಆಟಗಾರರು ಖರೀದಿಸಲು ತುದಿಗಾಲಿನಲ್ಲಿ ನಿಂತಿವೆ. ಈ ಬಾರಿ ಕೂಡಾ ಪಂಜಾಬ್ ಹಾಗೂ ಬೆಂಗಳೂರು ಮೂಲದ ಫ್ರಾಂಚೈಸಿ ನಡುವೆ ಆಟಗಾರರ ಖರೀದಿಯಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
ಬೆಂಗಳೂರು(ಫೆ.17): ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 18ರಂದು ಮಧ್ಯಾಹ್ನ 3 ಗಂಟೆಯಿಂದ ಐಪಿಎಲ್ ಆಟಗಾರರ ಹರಾಜು ಆರಂಭವಾಗಲಿದೆ.
ಈ ಬಾರಿ ಮಿನಿ ಹರಾಜು ಆಗಿರುವುದರಿಂದ ಎಲ್ಲಾ 8 ಫ್ರಾಂಚೈಸಿಗಳು ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ ಆಟಗಾರರು ಖರೀದಿಸಲು ತುದಿಗಾಲಿನಲ್ಲಿ ನಿಂತಿವೆ. ಈ ಬಾರಿ ಕೂಡಾ ಪಂಜಾಬ್ ಹಾಗೂ ಬೆಂಗಳೂರು ಮೂಲದ ಫ್ರಾಂಚೈಸಿ ನಡುವೆ ಆಟಗಾರರ ಖರೀದಿಯಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
ಈ ಬಾರಿಯ ಹರಾಜಿನಲ್ಲಿ ಯಾವೆಲ್ಲಾ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಗರಿಷ್ಠ ಮೂಲ ಬೆಲೆ ಹೊಂದಿದ ಆಟಗಾರರು ಯಾರ್ಯಾರು? ಕರ್ನಾಟಕದ ಎಷ್ಟು ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.