ಲತಾ ಮಂಗೇಶ್ಕರ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಅಭಿಮಾನಿಯಾಗಿದ್ದರು. ಸಚಿನ್ ತೆಂಡುಲ್ಕರ್ ಅವರ ಬ್ಯಾಟಿಂಗ್ ತಪ್ಪದೇ ವೀಕ್ಷಿಸುತ್ತಿದ್ದರು. ತೆಂಡುಲ್ಕರ್ ಶತಕಗಳ ಶತಕ ಬಾರಿಸಲಿ ಎಂದು ಸಹಾ ಮಂಗೇಶ್ಕರ್ ಪ್ರಾರ್ಥಿಸಿದ್ದರು. ಇನ್ನು ಲತಾ ಮಂಗೇಶ್ಕರ್ ಅವರನ್ನು ಮಾಸ್ಟರ್ ಬ್ಲಾಸ್ಟರ್ ಅಮ್ಮ ಎಂದು ಕರೆಯುತ್ತಿದ್ದರು.
ಮುಂಬೈ(ಫೆ.06): ಭಾರತ ಸಂಗೀತ ಕ್ಷೇತ್ರದ ದಿಗ್ಗಜ ಗಾಯಕಿ, ಭಾರತ ರತ್ನ ಪ್ರಶಸ್ತಿ ವಿಜೇತೆ ಲತಾ ಮಂಗೇಶ್ಕರ್ (Lata Mangeshkar) (92) ಇಂದು ಕೊನೆಯುಸಿರೆಳೆದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಮುಂಬೈನಲ್ಲಿರುವ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ.
ಲತಾ ಮಂಗೇಶ್ಕರ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar) ಅವರ ಅಭಿಮಾನಿಯಾಗಿದ್ದರು. ಸಚಿನ್ ತೆಂಡುಲ್ಕರ್ ಅವರ ಬ್ಯಾಟಿಂಗ್ ತಪ್ಪದೇ ವೀಕ್ಷಿಸುತ್ತಿದ್ದರು. ತೆಂಡುಲ್ಕರ್ ಶತಕಗಳ ಶತಕ ಬಾರಿಸಲಿ ಎಂದು ಸಹಾ ಮಂಗೇಶ್ಕರ್ ಪ್ರಾರ್ಥಿಸಿದ್ದರು. ಇನ್ನು ಲತಾ ಮಂಗೇಶ್ಕರ್ ಅವರನ್ನು ಮಾಸ್ಟರ್ ಬ್ಲಾಸ್ಟರ್ ಅಮ್ಮ ಎಂದು ಕರೆಯುತ್ತಿದ್ದರು.
ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೆ ಲಿಟ್ಲ್ ಮಾಸ್ಟರ್ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ಆಗಮಿಸಿ, ಅಗಲಿದ ಗಾಯಕಿಯ ಅಂತಿಮ ದರ್ಶನವನ್ನು ಪಡೆದಿದ್ದಾರೆ. ಇನ್ನು ತೆಂಡುಲ್ಕರ್ ಟ್ವೀಟ್ ಮೂಲಕವೂ ನುಡಿನಮನ ಸಲ್ಲಿಸಿದ್ದು, ಅವರು ಎಂದೆಂದಿಗೂ ಹಾಡಿನ ಮೂಲಕ ನಮ್ಮ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಎಂದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.