Sep 12, 2022, 7:45 PM IST
ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಭಾರತ ಮಹಿಳಾ ತಂಡ ಇದೀಗ ಎರಡನೇ ಪಂದ್ಯದತ್ತ ಚಿತ್ತ ನೆಟ್ಟಿದೆ. ಸೆ.13 ರಂದು ಡರ್ಬಿಯಲ್ಲಿ ಎರಡನೇ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಮಹಿಳಾ ತಂಡದ ಉಪನಾಯಕಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮೊದಲ ಪಂದ್ಯದಲ್ಲಿನ ಕೆಲ ತಪ್ಪುಗಳನ್ನು ಮರುಕಳಿಸುವುದಿಲ್ಲ. ದ್ವಿತೀಯ ಪಂದ್ಯದಲ್ಲಿ ಭಾರತ ಕಮ್‌ಬ್ಯಾಕ್ ಮಾಡಲಿದೆ ಎಂದು ಸ್ಮತಿ ಮಂದನಾ ಹೇಳಿದ್ದಾರೆ. ಮುಂಬರುವ ಸರಣಿಗೆ ತಯಾರಿ ಮಾಡಿಕೊಳ್ಳುತ್ತಿರುವ ಭಾರತ ಮಹಿಳಾ ತಂಡಕ್ಕೆ ಇದು ಅತ್ಯಂತ ಮಹತ್ವದ ಸರಣಿ ಎಂದು ಮಂದನಾ ಹೇಳಿದ್ದಾರೆ.