ದಕ್ಷಿಣ ಆಫ್ರಿಕಾ ಎದುರು ಎರಡನೇ ಟಿ20 ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ
ಎರಡನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 16 ರನ್‌ಗಳ ರೋಚಕ ಜಯ
ಎರಡನೇ ಟಿ20 ಗೆದ್ದು ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ
ತಮ್ಮ ಬೌಲರ್‌ಗಳ ಪರ ಬ್ಯಾಟ್ ಬೀಸಿದ ಉಪನಾಯಕ ಕೆ ಎಲ್ ರಾಹುಲ್
ಗುವಾಹಟಿ(ಅ.03): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ 16 ರನ್‌ಗಳ ರೋಚಕ ಜಯ ಸಾಧಿಸಿದೆ. ಬರ್ಸಾಪುರ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೊನೆಗೂ ರೋಚಕ ಗೆಲುವು ಸಾಧಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
ಕೆಲವೊಂದು ದಿನ ಬೌಲರ್‌ಗಳು ದುಬಾರಿಯಾಗುತ್ತಾರೆ. ನಮ್ಮ ಬೌಲರ್‌ಗಳು ಈ ಮೊದಲು ಉತ್ತಮ ಪ್ರದರ್ಶನ ತೋರಿದ್ದಾರೆ. ಇದೇ ಬೌಲಿಂಗ್ ಪಡೆ, ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಹರಿಣಗಳ ಪಡೆಯನ್ನು 106 ರನ್‌ಗಳಿಗೆ ಆಲೌಟ್ ಮಾಡಿತ್ತು ಎಂದು ರಾಹುಲ್ ಹೇಳಿದ್ದಾರೆ. ಕೆ ಎಲ್ ರಾಹುಲ್ ಸಂಪೂರ್ಣ ಸುದ್ದಿಗೋಷ್ಠಿ ಹೀಗಿದೆ ನೋಡಿ..