ಭಾರತದ ಪ್ರಧಾನಿ ಮನಸ್ಸು ಮಾಡಿದರೇ, ಪಾಕ್‌ ಕ್ರಿಕೆಟ್‌ ಮಂಡಳಿ ಬೀದಿಪಾಲು..!

ಭಾರತದ ಪ್ರಧಾನಿ ಮನಸ್ಸು ಮಾಡಿದರೇ, ಪಾಕ್‌ ಕ್ರಿಕೆಟ್‌ ಮಂಡಳಿ ಬೀದಿಪಾಲು..!

Suvarna News   | Asianet News
Published : Oct 08, 2021, 11:58 AM ISTUpdated : Oct 08, 2021, 12:00 PM IST

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನಡೆಯುತ್ತಿರುವುದು ಹಾಗೂ ಭಾರತದಿಂದಾಗಿಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡೆಯುತ್ತಿದೆ ಎನ್ನುವುದನ್ನು ರಮೀಜ್‌ ರಾಜಾ (Ramiz Raja) ಒಪ್ಪಿಕೊಂಡಿದ್ದಾರೆ. ಭಾರತದಿಂದಲೇ ಐಸಿಸಿಗೆ ಶೇಕಡ 90% ಧನಸಹಾಯವಾಗುತ್ತಿದೆ. ಈ ಹಣದಿಂದಲೇ ಪಾಕಿಸ್ತಾನದಲ್ಲಿ ನಡೆಯುವ ಟೂರ್ನಿಗಳಿಗೆ ಐಸಿಸಿ ಹಣ ನೀಡುತ್ತಿದೆ ಎಂದಿದ್ದಾರೆ.

ಕರಾಚಿ(ಅ.08): ಸತ್ಯವನ್ನು ಹೆಚ್ಚುದಿನ ಮುಚ್ಚಿಡಲು ಸಾಧ್ಯವಿಲ್ಲ, ಅದು ಒಂದಲ್ಲಾ ಒಂದು ದಿನ ಹೊರಗೆ ಬರಲೇ ಬೇಕು ಎನ್ನುವುದು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಮುಖ್ಯಸ್ಥ ರಮೀಜ್ ರಾಜಾ ಮಾತಿನಿಂದ ಮತ್ತೊಮ್ಮೆ ಸಾಬೀತಾಗಿದೆ. ಭಾರತದ ಪ್ರಧಾನಿ ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಚ್ಚಿಹೋಗಬಹುದು ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಹೌದು, ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನಡೆಯುತ್ತಿರುವುದು ಹಾಗೂ ಭಾರತದಿಂದಾಗಿಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡೆಯುತ್ತಿದೆ ಎನ್ನುವುದನ್ನು ರಮೀಜ್‌ ರಾಜಾ (Ramiz Raja) ಒಪ್ಪಿಕೊಂಡಿದ್ದಾರೆ. ಭಾರತದಿಂದಲೇ ಐಸಿಸಿಗೆ ಶೇಕಡ 90% ಧನಸಹಾಯವಾಗುತ್ತಿದೆ. ಈ ಹಣದಿಂದಲೇ ಪಾಕಿಸ್ತಾನದಲ್ಲಿ ನಡೆಯುವ ಟೂರ್ನಿಗಳಿಗೆ ಐಸಿಸಿ ಹಣ ನೀಡುತ್ತಿದೆ ಎಂದಿದ್ದಾರೆ.

ಐಸಿಸಿ (ICC) ನೀಡುವ ಹಣದಿಂದಲೇ ಪಾಕಿಸ್ತಾನದಲ್ಲಿ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಪಾಕಿಸ್ತಾನದಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳಿಗೆ ಐಸಿಸಿ 50% ಧನಸಹಾಯ ಮಾಡುತ್ತಿದೆ. ಒಂದು ವೇಳೆ ಭಾರತದ ಪ್ರಧಾನಿ, ನಾವು ಪಾಕಿಸ್ತಾನಕ್ಕೆ ಫಂಡಿಂಗ್ ಮಾಡುವುದಿಲ್ಲವೆಂದರೆ ಪಾಕ್‌ ಕ್ರಿಕೆಟ್ ಮಂಡಳಿ ಮುಚ್ಚಿ ಹೋಗಬಹುದು. ಹೀಗಾಗಿ ನಾವು ಆತ್ಮನಿರ್ಭರತೆಯನ್ನು ಸಾಧಿಸಬೇಕು ಎಂದು ರಮೀಜ್‌ ರಾಜಾ ಕರೆ ಕೊಟ್ಟಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ಸಂಸದರೊಬ್ಬರು, ಹಾಗಿದ್ದರೆ ಪಾಕಿಸ್ತಾನದಿಂದ ಐಸಿಸಿಗೆ ಎಷ್ಟು ಕೊಡುಗೆ ಸಿಗುತ್ತಿದೆ ಎಂದು ರಮೀಜ್ ರಾಜಾ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಾಜಾ, ಐಸಿಸಿಗೆ ಪಾಕಿಸ್ತಾನದಿಂದ ಸಿಗುತ್ತಿರುವ ಕೊಡುಗೆ ಶೂನ್ಯವೆಂದು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
03:25ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
03:26ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!
01:51Asia Cup 2025: ಒಂಬತ್ತನೇ ಟ್ರೋಫಿ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!