Mar 30, 2020, 1:15 PM IST
ಬೆಂಗಳೂರು(ಮಾ.30): ಕಡಿಮೆ ಅವಧಿಯಲ್ಲಿ ಹೀರೋ ಎನಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಟೀಂ ಇಂಡಿಯಾ ಪಾಲಿಗೆ 2007ರ ಟಿ20 ವಿಶ್ವಕಪ್ ಪಾಲಿಗೆ ಆಪತ್ಭಾಂಧವನಾಗಿ ಭಾರತೀಯರ ಹೃದಯ ಗೆದ್ದಿದ್ದ ಜೋಗಿಂದರ್ ಶರ್ಮಾ, ಇದೀಗ ರಿಯಲ್ ಲೈಫ್‌ನಲ್ಲೂ ಹೀರೋ ಎನಿಸಿಕೊಂಡಿದ್ದಾರೆ.
ಹೌದು, 2007ರ ಚೊಚ್ಚಲ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಕೊನೆಯ ಓವರ್ ಬೌಲಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದ ಜೋಗಿಂದರ್ ಶರ್ಮಾ ಪಾಕ್ ಸ್ಫೋಟಕ ಬ್ಯಾಟ್ಸ್‌ಮನ್ ಮಿಸ್ಬಾ ಉಲ್ ಹಕ್ ವಿಕೆಟ್ ಉರುಳಿಸಿ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದರು. ಆ ಬಳಿಕ ಅಷ್ಟಾಗಿ ಕ್ರಿಕೆಟ್ ಮೈದಾನದಲ್ಲಿ ಜೋಗಿಂದರ್ ಶರ್ಮಾ ಕಾಣಿಸಿಕೊಳ್ಳಲಿಲ್ಲ.
2007: hero 🏆
2020: Real world hero 💪
In his post-cricket career as a policeman, India's Joginder Sharma is among those doing their bit amid a global health crisis.
[📷 Joginder Sharma] pic.twitter.com/2IAAyjX3Se
ಆದರೆ ಇದೀಗ ಕೊರೋನಾ ಎನ್ನುವ ಮಹಾಮಾರಿಯ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಡಿಎಸ್‌ಪಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಶರ್ಮಾ ಜನರಲ್ಲಿ ಅರಿವು ಮೂಡಿಸುವ ಮೂಲಕ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ. ಜೋಗಿಂದರ್ ಶರ್ಮಾ ಕಾರ್ಯಕ್ಕೆ ಐಸಿಸಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.