2019ರ ಕೆಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಗೌತಮ್, ಆಫ್ ಸ್ಪಿನ್ನರ್ ಆಗಿದ್ದಕ್ಕೆ ಏನೋ ಟೀಂ ಇಂಡಿಯಾ ಆಯ್ಕೆ ಸಮಿತಿ ಅವಕಾಶ ನೀಡದೇ ಅನ್ಯಾಯ ಮಾಡುತ್ತಿದೆ.
ಬೆಂಗಳೂರು[ನ.06]: ಕೃಷ್ಣಪ್ಪ ಗೌತಮ್ ದೇಶಿ ಕ್ರಿಕೆಟ್’ನಲ್ಲಿ ಮಿಂಚುತ್ತಿರುವ ಅತ್ಯದ್ಭುತ ಪ್ರತಿಭೆ. ಆದರೆ ಭಾರತ ತಂಡದಲ್ಲಿ ಮಾತ್ರ ಸ್ಥಾನ ಸಿಕ್ಕಿಲ್ಲ. ಐಪಿಎಲ್, ದೇವಧರ್ ಟ್ರೋಫಿಯಲ್ಲಿ ಉತ್ತಮ ತೋರಿದ್ದರು ಆಯ್ಕೆ ಸಮಿತಿ ಇವರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.
2019ರ ಕೆಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಗೌತಮ್, ಆಫ್ ಸ್ಪಿನ್ನರ್ ಆಗಿದ್ದಕ್ಕೆ ಏನೋ ಟೀಂ ಇಂಡಿಯಾ ಆಯ್ಕೆ ಸಮಿತಿ ಅವಕಾಶ ನೀಡದೇ ಅನ್ಯಾಯ ಮಾಡುತ್ತಿದೆ.
ಕರುಣ್ ನಾಯರ್, ಮನೀಶ್ ಪಾಂಡೆ ಅವರಿಗೆ ಸಿಕ್ಕ ಅವಕಾಶ ಬೆರಳೆಣಿಕೆಯಷ್ಟೇ. ಕರ್ನಾಟಕದ ಆಟಗಾರರು ಕಂಡರೆ ಬಿಸಿಸಿಐಗೆ ಅಸಡ್ಡೆ ಇರಬೇಕು ಎನ್ನುವ ಅನುಮಾನ ಮೂಡತೊಡಗಿದೆ.