ಈ ಸರಣಿಯ ಮೇಲೆ ಇದೀಗ ಉಗ್ರರ ಕರಿನೆರಳು ಬಿದ್ದಿದೆ. ಲಷ್ಕರ್ ಏ ತೋಯ್ಬಾ ದಿಂದ ಬೆದರಿಕೆ ಪತ್ರಗಳು ಬಂದಿದ್ದು, ಇದೀಗ ಟೀಂ ಇಂಡಿಯಾ ಆಟಗಾರರಿಗೆ ಹೈ ಸೆಕ್ಯೂರಿಟಿ ಒದಗಿಸಲಾಗಿದೆ.
ನವದೆಹಲಿ(ಅ.30): ಭಾರತ-ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಆದರೆ ಈ ಸರಣಿಯ ಮೇಲೆ ಇದೀಗ ಉಗ್ರರ ಕರಿನೆರಳು ಬಿದ್ದಿದೆ. ಲಷ್ಕರ್ ಏ ತೋಯ್ಬಾ ದಿಂದ ಬೆದರಿಕೆ ಪತ್ರಗಳು ಬಂದಿದ್ದು, ಇದೀಗ ಟೀಂ ಇಂಡಿಯಾ ಆಟಗಾರರಿಗೆ ಹೈ ಸೆಕ್ಯೂರಿಟಿ ಒದಗಿಸಲಾಗಿದೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಉಗ್ರರ ಹಿಟ್ ಲಿಸ್ಟ್'ನಲ್ಲಿ ಸ್ಥಾನ ಪಡೆದಿರುವುದು ಅಭಿಮಾನಿಗಳ ಆತಂತಕ್ಕೆ ಕಾರಣವಾಗಿದೆ. ನವೆಂಬರ್ ಮೂರರಿಂದ ಸೀಮಿತ ಓವರ್'ಗಳ ಸರಣಿ ಆರಂಭವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ....