ಭಾರತದ ತಾರಾ ಜೋಡಿಯಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿ ದೇಶದ ಜನತೆಗೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಆದಷ್ಟು ಸ್ವಚ್ಚವಾಗಿಯೇ ಹಾಗೆಯೇ ಪ್ರತ್ಯೇಕವಾಗಿರುವುದರ ಮೂಲಕ ಆರೋಗ್ಯವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನವದೆಹಲಿ(ಮಾ.20): ಕೊರೋನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ(ಮಾ.22) ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಭಾರತದ ತಾರಾ ಜೋಡಿಯಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿ ದೇಶದ ಜನತೆಗೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಆದಷ್ಟು ಸ್ವಚ್ಚವಾಗಿಯೇ ಹಾಗೆಯೇ ಪ್ರತ್ಯೇಕವಾಗಿರುವುದರ ಮೂಲಕ ಆರೋಗ್ಯವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ವೈರಸ್ ಬಿಸಿ ಭಾರಕ್ಕೂ ತಟ್ಟಿದ್ದು ಇದುವರೆಗೂ 230ಕ್ಕೂ ಅಧಿಕ ಫಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ಐಪಿಎಲ್ ಸೇರಿದಂತೆ ಹಲವು ಟೂರ್ನಿಗಳು ಮುಂದೂಡಲ್ಪಟ್ಟಿವೆ.