ಹಲವು ಕ್ರೀಡಾ ಟೂರ್ನಿಗಳು ಕೊರೋನಾ ವೈರಸ್ ಭೀತಿಯಿಂದಾಗಿ ಮುಂದೂಡಲ್ಪಟ್ಟಿವೆ. ಇದೀಗ ದಕ್ಷಿಣ ಆಫ್ರಿಕಾ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಾಡಲು ಭಾರತಕ್ಕೆ ಬಂದಿಳಿದೆ. ಭಾರತದಲ್ಲೂ ಕರೋನಾ ಸೋಂಕು ಪತ್ತೆಯಾಗಿದೆ.
ನವದೆಹಲಿ(ಮಾ.10): ಕೊರೋನಾ ವೈರಸ್ ತನ್ನ ಕಬಂದಬಾಹುಗಳನ್ನು ಜಗತ್ತಿನ ಎಲ್ಲಾ ಕಡೆ ಚಾಚಿದೆ. ಈಗಾಗಲೇ ಜಗತ್ತಿನ ನಾನಾ ಮೂಲೆಗಳಿಂದ ಸುಮಾರು ಮೂರು ಸಾವಿರ ಜನ ಕೊನೆಯುಸಿರೆಳೆದಿದೆ. ಕೊರೋನಾ ವೈರಸ್ ಕ್ರೀಡಾ ಜಗತ್ತಿನ ಮೇಲೂ ತನ್ನ ಕೆಂಗಣ್ಣು ಬೀರಿದೆ.
ಹೌದು, ಹಲವು ಕ್ರೀಡಾ ಟೂರ್ನಿಗಳು ಕೊರೋನಾ ವೈರಸ್ ಭೀತಿಯಿಂದಾಗಿ ಮುಂದೂಡಲ್ಪಟ್ಟಿವೆ. ಇದೀಗ ದಕ್ಷಿಣ ಆಫ್ರಿಕಾ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಾಡಲು ಭಾರತಕ್ಕೆ ಬಂದಿಳಿದೆ. ಭಾರತದಲ್ಲೂ ಕರೋನಾ ಸೋಂಕು ಪತ್ತೆಯಾಗಿದೆ.
ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ಹರಿಣಗಳ ಪಡೆ ಕೈಗೊಂಡಿದೆ. ದಕ್ಷಿಣ ಆಫ್ರಿಕಾ ತಂಡ ಮಾಸ್ಕ್ ಧರಿಸಿಯೇ ಭಾರತಕ್ಕೆ ಬಂದಿಳಿದಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.