ಆಸ್ಟ್ರೇಲಿಯಾ ಎದುರು 2003ರ ವಿಶ್ವಕಪ್ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ರೆಡಿ..!

Nov 19, 2023, 1:09 PM IST

ಬೆಂಗಳೂರು(ನ.19): 2023ರ ವಿಶ್ವಕಪ್ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಪ್ರಶಸ್ತಿಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸತತ 10 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ. ಇನ್ನೊಂದೆಡೆ ಮೊದಲೆರಡು ಪಂದ್ಯ ಸೋತು ಅ ಬಳಿಕ ಸತತ ಎಂಟು ಪಂದ್ಯ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ

ಹಲವು ರೆಕಾರ್ಡ್‌ ಬ್ರೇಕ್ ಮಾಡಿರುವ ಭಾರತ, ಹಳೆಯ ವಿಶ್ವಕಪ್ ಸೋಲಿನ ಲೆಕ್ಕಾಚಾರ ಚುಕ್ತಾ ಮಾಡುತ್ತಾ ಬಂದಿದೆ. ಮೊದಲಿಗೆ ಪದೇ ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ಎದುರು ಮುಗ್ಗರಿಸುತ್ತಾ ಬಂದಿದ್ದ ಟೀಂ ಇಂಡಿಯಾ, ಇದೀಗ ಎರಡೆರಡು ಬಾರಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದಿದೆ. ಲೀಗ್ ಹಂತದಲ್ಲಿ 4 ವಿಕೆಟ್ ಅಂತರದಲ್ಲಿ ಗೆದ್ದಿದ್ದ ಭಾರತ, ಇದಾದ ಬಳಿಕ ಸೆಮೀಸ್‌ನಲ್ಲಿ 70 ರನ್ ಅಂತರದ ಜಯ ದಾಖಲಿಸಿದೆ. ಈ ಮೂಲಕ ಕಳೆದ ವಿಶ್ವಕಪ್ ಸೋಲಿನ ಲೆಕ್ಕಾಚುಕ್ತಾ ಮಾಡಿದೆ.

ವಿಶ್ವಕಪ್ ಫೈನಲ್‌ ವೇಳೆ ಮಳೆ ಬಂದ್ರೆ ಏನಾಗುತ್ತೆ? ಪಿಚ್ ರಿಪೋರ್ಟ್ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

2003ರ ಸೋಲಿಗೆ 2023ರಲ್ಲಿ ರಿವೇಂಜ್ ತೆಗೆದುಕೊಳ್ಳುವ ಸಮಯ

ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಆಘಾತಕಾರಿ ಸೋಲು ಅನುಭವಿಸುವ ಮೂಲಕ ಎರಡನೇ  ಬಾರಿಗೆ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಇದೀಗ ಎರಡು ದಶಕಗಳ ಹಿಂದಿನ ಸೆಮೀಸ್ ಸೋಲಿನ ಲೆಕ್ಕಾ ಚುಕ್ತಾ ಮಾಡಲು ರೋಹಿತ್ ಶರ್ಮಾ ಪಡೆ ತುದಿಗಾಲಿನಲ್ಲಿ ನಿಂತಿದೆ.