ಯಶ್​ ರಾಮಾಯಣ ಟೀಸರ್ ಸಾವಿರ ಕೋಟಿ ಕಲೆಕ್ಷನ್​ ಕಂಡು ಷೇರು ಮಾರುಕಟ್ಟೆ ಶೇಕ್​!

ಯಶ್​ ರಾಮಾಯಣ ಟೀಸರ್ ಸಾವಿರ ಕೋಟಿ ಕಲೆಕ್ಷನ್​ ಕಂಡು ಷೇರು ಮಾರುಕಟ್ಟೆ ಶೇಕ್​!

Published : Jul 10, 2025, 05:27 PM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಶೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ. ಚಿತ್ರ ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್‌ಗೆ ಸಾವಿರ ಕೋಟಿ ಲಾಭವಾಗಿದ್ದು, ಷೇರು ದರ ಶೇ.30 ರಷ್ಟು ಏರಿಕೆಯಾಗಿದೆ. ಯಶ್​ ಖದರ್​ ಶೇರು ಮಾರುಕಟ್ಟೆಯಲ್ಲೂ ಸಿಡಿಲಬ್ಬರ ಎಬ್ಬಿಸಿದೆ.

ರಾಮಾಯಣ.. ರಾಕಿಂಗ್ ಸ್ಟಾರ್​ ಯಶ್​​​ ರಾವಣನಾಗಿ ನಟಿಸುತ್ತಿರೋ ಸಿನಿಮಾ.. ಯಶ್​​ ತನ್ನ ಮಾನ್​ಸ್ಟಾರ್​ ಮೈಂಡ್​ ಕ್ರಿಯೇಷನ್ಸ್​ ಮೂಲಕ ಬಂಡವಾಳ ಹೂಡಿರೋ ಚಿತ್ರ. ಈ ರಾಮಾಯಣದ ಫಸ್ಟ್ ಗ್ಲಿಮ್ಸ್ ಬಂದಿದೆ. ಇದೊಂದು ಟೀಸರ್​ ಶೇರು ಮಾರುಕಟ್ಟೆಯಲ್ಲಿ ಹೊಸ ರಾಮಾಯಣವನ್ನೇ ಸೃಷ್ಟಿದಿದೆ.

ರಾಮಾಯಣ ಟೀಸರ್ ಬಂದಿದ್ದೇ ತಡ ಶೇರು ಮಾರುಕಟ್ಟೆ ಶೇಕ್ ಆಗಿದೆ. ಒಂದೇ ಒಂದು ಟೀಸರ್​ ಸಾವಿರ ಕೋಟಿ ಕಲೆಕ್ಷನ್ ಮಾಡೋ ಹಾಗೆ ಮಾಡಿದೆ. ಯಶ್​ ಹೊಸ ರೆಕಾರ್ಡ್ ಬರೆಯೋ ಹಾಗಾಗಿದೆ. 1500 ಕೋಟಿ ಬಂಡವಾಳದಲ್ಲಿ ಎರಡು ಪಾರ್ಟ್​​ನಲ್ಲಿ ಬರ್ತಾ ಇರೋ ಈ ಸಿನಿಮಾದಲ್ಲಿ ಯಶ್​ ರಾವಣನಾಗಿ ನಸಿಸ್ತಾ ಇದ್ದಾರೆ. ಇದೀಗ ರಾಮಾಯಣ ಟೀಸರ್​​​​ನಿಂದ ಸಿನಿಮಾ ನಿರ್ಮಾಣ ಮಾಡುತ್ತಿರೋ ಪ್ರೈಂ ಫೋಕಸ್ ಸಂಸ್ಥೆಗೆ 1000 ಕೋಟಿ ಬಂದಂತಾಗಿದೆ.

ನಿಮಿತ್ ಮಲ್ಹೋತ್ರಾ ತಮ್ಮ ಪ್ರೈಂ ಫೋಕಸ್ ಸಂಸ್ಥೆ ಬ್ಯಾನರ್ ಅಡಿಯಲ್ಲಿ 'ರಾಮಾಯಣ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇವರ ಜೊತೆ ಯಶ್ ಕೂಡ ಜೊತೆಯಾಗಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಪಟ್ಟಿ ಮಾಡಲಾದ ಪ್ರೈಮ್ ಫೋಕಸ್ ಲಿಮಿಟೆಡ್ ಕಳೆದೊಂದು ವಾರದಿಂದ ಸುದ್ದಿಯಲ್ಲಿದೆ. 'ರಾಮಾಯಣ' ಟೀಸರ್ ರಿಲೀಸ್ ಬೆನ್ನಲ್ಲೇ ಈ ಕಂಪನಿ ಮೇಲೆ ಹೂಡಿಕೆ ಹೆಚ್ಚಾಗಿದೆ. ಇದರಿಂದ ಪ್ರೈಮ್ ಫೋಕಸ್ ಷೇರು ದರ 30% ಏರಿಕೆಯಾಗಿದ್ದು, ಸಾವಿರ ಕೋಟಿ ಗಳಿಕೆ ಕಂಡಿದೆ. ಇದು ಯಶ್​ರ ರಾಮಾಯಣ ಸಿನಿಮಾ ಮೇಲಿರೋ ಕ್ರೇಜ್​ಗೆ ದೊಡ್ಡ ಸಾಕ್ಷಿ

ಎರಡು ಪಾರ್ಟ್​​ನಲ್ಲಿ ಬರುತ್ತಿರೋ ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಬಜೆಟ್ 1500 ಕೋಟಿ ಎನ್ನಲಾಗ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಈ ಟೀಸರ್ ನೋಡಿದ ಯಶ್​ ಫ್ಯಾನ್ಸ್​ ಹಿಂದಿಯಲ್ಲಿರೋ ಕಾನ್​, ಕಪೂರ್​ ಕಾನ್​​​​ದಾನ್​​ ಎಲ್ಲರೂ ಗಂಟು ಮೂಟೆ ಕಟ್ಟಿ ಇನ್ನುಂದೆ ಬಾಲಿವುಡ್​ ನಮ್ಮ ರಾಕಿದು ಅಂತ ವಿಜೃಂಭಿಸಿದ್ರು. ಈಗ ರಾಮಾಯಣ ಟೀಸರ್​ ನಿಂದ ಪ್ರೈಮ್ ಫೋಕಸ್ ಷೇರುಗಳು ಬಿಸ್ಕೆಟ್​ನಂತೆ ಬಿಕರಿ ಆಗುತ್ತಿವೆ. ಸ್ವತಃ ನಟ ರಣ್‌ಬೀರ್ ಕಪೂರ್ ಈ ಪ್ರೈಂ ಫೋಕಸ್ ಕಂಪನಿ ಮೇಲೆ 20 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಯಶ್​ ಖದರ್​ ಶೇರು ಮಾರುಕಟ್ಟೆಯಲ್ಲೂ ಸಿಡಿಲಬ್ಬರ ಎಬ್ಬಿಸಿದೆ.

 

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
Read more