ಗೇಮ್ ಚೇಂಜರ್ ಪ್ರೀ ಲಾಂಚ್ ಇವೆಂಟ್​ಗೆ ಗೈರಾಗಿದ್ದೇಕೆ ನಟಿ ಕಿಯಾರಾ?

Jan 6, 2025, 6:23 PM IST

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾನಿ ನಟಿಸ್ತಾ ಇರೋ ಸಂಗತಿ ನಿಮಗೆ ಗೊತ್ತೇ ಇದೆ. ರಾಮ್​ಚರಣ್​ ನಟನೆಯ ಗೇಮ್ ಚೇಂಜರ್ ಸಿನಿಮಾದಲ್ಲೂ ಕಿಯಾರಾನೇ ಲೀಡಿಂಗ್ ಲೇಡಿ. ಇತ್ತೀಚಿಗೆ ನಡೆದ ಗೇಮ್ ಚೇಂಜರ್ ಸಿನಿಮಾದ ಪ್ರೀಲಾಂಚ್ ಇವೆಂಟ್​ಗೆ ಕಿಯಾರಾ ಗೈರಾಗಿದ್ರು. ಅದರ ಬೆನ್ನಲ್ಲೇ ಕಿಯಾರಾ ಆಸ್ಪತ್ರೆ ಸೇರಿರೋ ಸುದ್ದಿ ಸದ್ದು ಮಾಡ್ತಾ ಇದೆ. ಹಾಗಾದ್ರೆ ಟಾಕ್ಸಿಕ್ ಬ್ಯೂಟಿಗೆ ಏನಾಯ್ತು.. ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. 

ಯೆಸ್ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾನಿ ಕುರಿತ ಸುದ್ದಿಯೊಂದು ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಇತ್ತೀಚಿಗೆ ಆಂಧ್ರದಲ್ಲಿ ನಡೆದ ಗೇಮ್ ಚೇಂಜರ್ ಮೂವಿಯ ಪ್ರೀ ಲಾಂಚ್ ಇವೆಂಟ್​​ಗೆ ಕಿಯಾರಾ ಗೈರಾಗಿದ್ರು. ಗೇಮ್ ಚೇಂಜರ್ ಏನೂ ಸಣ್ಣ ಸಿನಿಮಾ ಅಲ್ಲ ಭರ್ತಿ 500 ಕೋಟಿ ಬಜೆಟ್​​ನಲ್ಲಿ ಸಿದ್ದವಾಗಿರೋ ಪ್ಯಾನ್ ಇಂಡಿಯಾ ಮೂವಿ. ಈ ಚಿತ್ರದಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಜೊತೆಗೆ ನಾಯಕಿಯಾಗಿ ಮಿಂಚಿರೋದು ಇದೇ ಕಿಯಾರಾ. ಇಷ್ಟು ದೊಡ್ಡ ಸಿನಿಮಾದ ನಾಯಕಿ ಪ್ರೀ ಲಾಂಚ್ ಇವೆಂಟ್​​ಗೆ ಚಕ್ಕರ್ ಹಾಕಿದ್ದೇಕೆ ಅನ್ನೋ ಪ್ರಶ್ನೆ ಫ್ಯಾನ್ಸ್ ನಡುವೆ ಹುಟ್ಟಿಕೊಂಡಿತ್ತು. ಅದಕ್ಕೆ ಉತ್ತರ ಹುಡುಕಹೋದವರಿಗೆ ಕಿಯಾರಾ ಮುಂಬೈನಲ್ಲಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ ಅನ್ನೋ ಶಾಕಿಂಗ್ ವಿಷ್ಯ ರಿವೀಲ್ ಆಗಿದೆ. ಹೌದು ಕಿಯಾರಾ ಆರೋಗ್ಯದಲ್ಲಿ ಏರುಪೇರಾದ ಕಾರಣ ಶುಕ್ರವಾರವೇ  ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟಕ್ಕೂ ಕಿಯಾರಾಗೆ ಅಂಥದ್ದೇನಾಗಿದೆ ಅಂತ ನೋಡಹೋದ್ರೆ, ಸತತ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿ ಆರೋಗ್ಯ ನಿರ್ಲಕ್ಷಿಸಿದ್ದೇ ಈಕೆಯ ಆರೋಗ್ಯ ಹದಗೆಡೋದಕ್ಕೆ ಕಾರಣವಂತೆ. ಫಗ್ಲಿ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಕಿಯಾರಾ ದಶಕದಿಂದಲೂ ಬಿಜಿಯೆಸ್ಟ್ ನಟಿಮಣಿ. ಬಾಲಿವುಡ್ ಸಿನಿಮಾಗಳ ಜೊತೆಗೆ ಸೌತ್​ನ ಬಿಗ್ ಪ್ರಾಜೆಕ್ಟ್​​ಗಳಲ್ಲಿ ಬಿಗ್ ಸ್ಡಾರ್ಸ್ ಜೊತೆಗೆ ನಟಿಸಿ ಮಿಂಚಿರೋ ಈ ಚೆಲುವೆ ಕಳೆದ ವರ್ಷ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಹಸೆಮಣೆ ಏರಿದ್ರು. ಆದ್ರೆ ಮದುವೆ ಬಳಿಕವೂ ಕಿಯಾರಾಗೆ ಆಫರ್​ಗಳು ಕಮ್ಮಿಯಾಗಿಲ್ಲ. ಬಾಲಿವುಡ್​ನ ಬಿಗ್ಗೆಸ್ಟ್ ಌಕ್ಷನ್ ಡ್ರಾಮಾ ವಾರ್​-2ನಲ್ಲಿ ಕಿಯಾರಾ ನಟಿಸ್ತಾ ಇದ್ದಾಳೆ. ಇತ್ತ ರಾಮ್ ಚರಣ್ ನಟನೆಯ - ಶಂಕರ್ ನಿರ್ದೇಶನದ ಗೇಮ್ ಚೇಂಜರ್ ನಲ್ಲಿ ನಾಯಕಿಯಾಗಿ ಮಿಂಚಿದ್ದು ಇದೇ ಜನವರಿ 10ಕ್ಕೆ ಆ ಸಿನಿಮಾ ರಿಲೀಸ್ ಆಗ್ತಾ ಇದೆ. ಇದೆಲ್ಲಾ ಒತ್ತಟ್ಟಿಗಿರಲಿ ನಮ್ಮ ರಾಕಿಭಾಯ್ ಯಶ್ ನಟನೆಯ ಮೋಸ್ಟ್ ಅವೇಟೆಡ್ ಸಿನಿಮಾ ಟಾಕ್ಸಿಕ್​ಗೂ ಈಕೆಯೇ ನಾಯಕಿ.  ಕೆಜಿಎಫ್ ಬಳಿಕ ಯಶ್ ಜೊತೆಗೆ ನಟಿಸೋದಕ್ಕೆ ಇಡೀ ಇಂಡಿಯನ್ ಸಿನಿರಂಗದ ಟಾಪ್ ನಟಿಯರೆಲ್ಲಾ ಸರತಿ ಸಾಲಲ್ಲಿ ನಿಂತಿದ್ರು. ಆದ್ರೆ ಈ ಅದೃಷ್ಟ ಸಿಕ್ಕಿದ್ದು ಮಾತ್ರ ಸಪೂರ ಸುಂದರಿ ಕಿಯಾರಾಗೆ.  ಒಂದು ಕಡೆಗೆ ಬಾಲಿವುಡ್​ನ ವಾರ್ 2 , ಇನ್ನೊಂದೆಡೆ ಟಾಕ್ಸಿಕ್​ನಂತಹಾ ಬಿಗ್ ಸಿನಿಮಾಗಳ ಶೂಟಿಂಗ್​ನಲ್ಲಿ ಅವಿರತವಾಗಿ ತೊಡಗಿಕೊಂಡಿರೋ ಕಿಯಾರಾಗೆ ಗೇಮ್ ಚೇಂಜರ್​ ಸಿನಿಮಾದ ಪ್ರಮೋಷನ್​ನಲ್ಲಿ ಬೇರೆ ಭಾಗಿಯಾಗೋ ಒತ್ತಡ ಇದೆ. ಈ ಒತ್ತಡದ ನಡುವೆಯೇ ಕಿಯಾರಾ ಹೆಲ್ತ್ ಅಪ್​ಸೆಟ್​​ ಆಗಿ ಆಸ್ಪತ್ರೆ ಸೇರಿದ್ದಾರೆ. ಫ್ಯಾನ್ಸ್ ಕಿಯಾರಾಗೆ ಗೆಟ್ ವೆಲ್ ಸೂನ್ ಅಂತಿದ್ದಾರೆ.