Jul 29, 2022, 6:50 PM IST
ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಇಬ್ಬರು ಮುಂಬೈ ಲೋಕಲ್ ಟ್ರೈನ್ ನಲ್ಲಿ ಓಡಾಡಿದ್ದಾರೆ. ಅನನ್ಯಾ ಜೊತೆ ಟ್ರೈನ್ ನಲ್ಲಿ ಮುಂಬೈ ಸುತ್ತಿದ ವಿಜಯ್ ದೇವರಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಇಬ್ಬರು ದುಬಾರಿ ಕಾರು ಬಿಟ್ಟು ಜನಸಾಮಾನ್ಯರು ಓಡಾಡುವ ಟ್ರೈನ್ ಹತ್ತಲು ಕಾರಣ ಲೈಗರ್ ಸಿನಿಮಾ ಪ್ರಮೋಷನ್. ಪೂರಿ ಜಗನ್ನಾಥ್ ನಿರ್ದೇಶನದ ಟೈಗರ್ ಸಿನಿಮಾ ಆಗಸ್ಟ್ 25 ರಂದು ಬಿಡುಗಡೆಯಾಗುತ್ತಿದೆ. ವಿಜಯ್ ದೇವರಕೊಂಡ ಮತ್ತು ಅನನ್ಯಾ ಇಬ್ಬರು ಟ್ರೈನ್ ನಲ್ಲಿರುವ ವಿಡಿಯೋ ನೋಡಿ ಅಭಿಮಾನಿಗಳು ತಹೇವಾರ್ ಕಾಮೆಂಟ್ ಮಾಡುತ್ತಿದ್ದಾರೆ. ಅನನ್ಯಾ ಕೈ ಹಿಡಿದು ಟ್ರೈನ್ ನಲ್ಲಿ ನಿಂತಿದ್ದಾರೆ. ಮತ್ತೊಂದು ಕಡೆ ವಿಜಯ್ ದೇವರಕೊಂಡ, ಅನನ್ಯಾ ತೊಡೆ ಮೇಲೆ ಮಲಗಿದ್ದಾರೆ. ಅನನ್ಯಾ ಪಾಂಡೆ ಡೆನಿಮ್ ಪ್ಯಾಂಟ್ ಮತ್ತು ಹಳದಿ ಬಣ್ಣದ ಟಾಪ್ ಧರಿಸಿದ್ದರು. ವಿಜಯ್ ದೇವರಕೊಂಡ ಬ್ಲ್ಯಾಕ್ ಟಿ ಶರ್ಟ್ ಮತ್ತು ಪ್ಯಾಂಟ ಧರಿಸಿದ್ದರು. ಇಬ್ಬರು ಮುಂಬೈ ಲೋಕಲ್ ಟ್ರೈನ್ ನಲ್ಲಿ ಓಡಾಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ.