ಅಪ್ಪು ಹಾದಿಯಲ್ಲಿ ವಿಜಯ್ ದೇವರಕೊಂಡ: ಅಂಗಾಂಗ ದಾನ ಘೋಷಣೆ

Nov 20, 2022, 11:59 AM IST

ಅಪ್ಪು ಅಗಲಿಕೆಯ ನಂತರ ಭಾರತೀಯ ಚಿತ್ರರಂಗದ ಹಲವು ನಟರು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪು ಆ ಮಟ್ಟಕ್ಕೆ ಎಲ್ಲರ ಮೇಲೂ ಪ್ರಭಾವ ಬೀರಿದ್ದಾರೆ. ಇದೀಗ ವಿಜಯ್ ದೇವರಕೊಂಡಗೂ ಅಪ್ಪು ಆದರ್ಶ ಆಗಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ನಿಧನ ನಂತರ ಅಂಗಾಗ ದಾನ ಮಾಡಿದ್ರು. ಈಗ ಅಪ್ಪು ಅವರ ಹಾಗೆ ನಟ ವಿಜಯ್ ದೇವರಕೊಂಡ ಕೂಡ ತಮ್ಮ ಅಂಗಾಂಗ ದಾನ ಮಾಡುವ ಘೋಷಣೆ ಮಾಡಿ ಇದಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಅಪ್ಪು ಸಮಾಧಿಗೆ ಭೇಟಿ ಕೊಟ್ಟ ನಂತರ ವಿಜಯ್ ದೇವರಕೊಂಡ ತನ್ನ ಅಂಗಾಂಗ ದಾನ ಮಾಡೋ ದೊಡ್ಡ ನಿರ್ಧಾರ ಮಾಡಿದ್ದಾರೆ. ಇದೆ ಅಲ್ವಾ ನಮ್ಮ ಅಪ್ಪು ಪವರ್ ಅಂದ್ರೆ.

ನಾನಿವತ್ತು ಏನಾಗಿದ್ದರೂ ಅದು ನಿನ್ನಿಂದ; ಅವಾರ್ಡ್ ಶೋನಲ್ಲಿ ಸಿದ್ಧಾರ್ಥ್ ನೆನೆದು ಶೆಹನಾಜ್ ಗಿಲ್ ಭಾವುಕ