Aug 27, 2022, 12:30 PM IST
ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಅದ್ದೂರಿಯಾಗಿ ರಿಲೀಸ್ ಆದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ 30 ಕೋಟಿ ರೂಪಾಯಿಯಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಮಾತು ಕೇಳಿಬರುತ್ತಿದೆ. ಮೊದಲ ದಿನ ಬಿಗ್ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ಬಳಿಕ ದಿಢೀರ್ ಡೌನ್ ಆಗಿದೆ. ಲೈಗರ್ ಸಿನಿಮಾಗೆ ನೇಗೆಟಿವ್ ಕಾಮೆಂಟ್ ಹರಿದುಬರುತ್ತಿದೆ. ದೊಡ್ಡ ಮಟ್ಟದಲ್ಲಿ ತಾಯಾರಾಗಿರುವ ಲೈಗರ್ ಸಿನಿಮಾದ ಪಾತ್ರಕ್ಕಾಗಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಇಬ್ಬರಿಗೂ ದೊಡ್ಡ ಸಂಭಾವನೆ ಕೊಡಲಾಗಿತ್ತು. ಆದರೀಗ ಸಿನಿಮಾಗ ನೆಗೆಟಿವ್ ವಿಮರ್ಶೆಯಿಂದ ಸಾಕಷ್ಟು ಹಿನ್ನಡೆಯಾಗಿದೆ.