ತೆಲುಗು ಚಿತ್ರರಂಗಕ್ಕೆ ಡಬ್ಬಿಂಗ್‌ ಭಯ: ನಿರ್ಮಾಪಕರ ನಿರ್ಧಾರ ಏನು ಗೊತ್ತಾ?

Nov 15, 2022, 4:22 PM IST

ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಸಂಕ್ರಾಂತಿಗೆ ತೆಲುಗು ಭಾಷೆಯ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಜೊತೆಗೆ ಕನ್ನಡ, ತೆಲುಗು ಹಾಗೂ ತಮಿಳು ಹೀಗೆ ಮೂರೂ ಭಾಷೆಯಲ್ಲೂ ದೊಡ್ಡವರ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಆ ಕಡೆ ತಮಿಳಿನಲ್ಲಿ ಅಜಿತ್‌ ಸಿನಿಮಾ, ಈ ಕಡೆ ವಿಜಯ್‌ ಅವರ ವಾರಿಸು ಸಿನಿಮಾ ಎಲ್ಲಾ ರಿಲೀಸ್‌ಗೆ ರೆಡಿಯಾಗಿವೆ. ಇದನೆಲ್ಲಾ ನೋಡಿಕೊಂಡು ತೆಲುಗಿನವರಿಗೆ ಡಬ್ಬಿಂಗ್ ಭಯ ಎದುರಾಗಿದೆ. ಈಗಾಗಲೇ ಕಾಂತಾರ ಸಿನಿಮಾದಿಂದ ನಮ್ಮ ಸಿನಿಮಾಗಳಿಗೆ ಥಿಯೇಟರ್‌ ಸಿಕ್ಕಿಲ್ಲ‌. ಇನ್ನು ವಾರಿಸು ಸಿನಿಮಾ ಬಂದರೆ ನಮ್ಮ ಚಿತ್ರಗಳನ್ನು ಯಾರು ಕೇಳುವವರೆ ಇಲ್ಲ. ಹಾಗಾಗಿ ಸಂಕ್ರಾಂತಿಯಷ್ಟರಲ್ಲಿ ನಮ್ಮ ದೊಡ್ಡ ದೊಡ್ಡ ಚಿತ್ರ ರಿಲೀಸ್‌ ಆಗುವುದು ಇದೆ. ಹಾಗಾಗಿ ಇದ್ದಕ್ಕೆ ನಾವು ಕಡಿವಾಣ ಹಾಕಲೇಬೇಕು. ಬೇರೆ ಭಾಷೆಯಿಂದ ಡಬ್ಬಿಂಗ್‌ ಆಗಿ ಬರುವ ಚಿತ್ರಗಳಿಗೆ ನೆಕ್ಸ್ಟ್‌ ಪ್ರಿಯಾರಿಟಿ ಕೊಡಿ, ಫಸ್ಟ್ ತೆಲುಗು ಚಿತ್ರಕ್ಕೆ ಪ್ರಾಮುಖ್ಯತೆ ಕೊಡಿ ಎಂದು  ಆಂಧ್ರ ಹಾಗೂ ತೆಲಂಗಾಣ ಎರಡು ರಾಜ್ಯಗಳಲ್ಲೂ ಟಾಕಿಸ್‌'ಗಳಿಗೆ ಪ್ರೊಡ್ಯೂಸರ್ ಎಲ್ಲರೂ ಕೇಳಿಕೊಂಡಿದ್ದಾರಂತೆ. ಅಲ್ಲಿನ ಫಿಲ್ಮಂ ಚೇಂಬರ್'ಗೂ ಇದೇ ವಿಷಯವನ್ನು ಕೇಳಿಕೊಂಡಿದ್ದಾರಂತೆ.

Krishna Death; ದುಃಖದಲ್ಲಿರುವ ಮಹೇಶ್ ಬಾಬುನ ತಬ್ಬಿ ಧೈರ್ಯ ತುಂಬಿದ ರಾಮ್, ಅಲ್ಲು, ಚಿರು ಮತ್ತು Jr.NTR