Anasuya Bharadwaj: ಆಂಟಿ ಎಂದವನಿಗೆ ಸರಿಯಾಗಿ ಜಾಡಿಸಿದ ನಿರೂಪಕಿ!

Mar 6, 2022, 5:39 PM IST

ಟಾಲಿವುಡ್‌ನ (Tollywood) ಖ್ಯಾತ ಆಂಕರ್ ಮತ್ತು ನಟಿ ಅನಸೂಯ ಭಾರದ್ವಾಜ್ (Anasuya Bharadwaj) ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅವರು ಶಾರ್ಟ್ಸ್ (ಚಡ್ಡಿ) ಧರಿಸಿದ್ದರು. ಇದನ್ನು ನೋಡಿದ ಒಂದಷ್ಟು ನೆಟ್ಟಿಗರು ಹೊಗಳಿ ಸೂಪರ್ ಅಂದಿದ್ದು, ಇನ್ನೊಂದಷ್ಟು ನೆಟ್ಟಿಗರು ತೆಗಳಿ ಆಂಟಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಆಂಟಿ ಎಂದು ಕರೆದವನಿಗೆ ಅನಸೂಯ ಸಿಕ್ಕಾಪಟ್ಟೆ ಸರಿಯಾಗಿ ಜಾಡಿಸಿದ್ದಾರೆ. 

Shilpa Shetty: ಬಾಲಿವುಡ್ ನಟಿಗೆ ಕೋಪ ಬಂದ್ರೆ ಏನ್ ಮಾಡ್ತಾರೆ ಗೊತ್ತಾ?

ನಾವು ಎಂತಹ ಬಟ್ಟೆ ಹಾಕಬೇಕು ಅಂತ ಹೇಳೋಕೆ ನೀವ್ಯಾರು ಅಂತಾ ಹೇಳಿ ನೆಟ್ಟಿಗನ ಬಾಯಿ ಮುಚ್ಚಿಸಿದ್ದಾರೆ. ಅಂದಹಾಗೆ ಅನಸೂಯ ಇತ್ತೀಚೆಗೆ ಸಿನಿಮಾಗಳಲ್ಲಿ ಮೆಚೂರ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದಲ್ಲಿ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದರು. ಮಾತ್ರವಲ್ಲದೇ ರವಿತೇಜ ನಟನೆಯ 'ಕಿಲಾಡಿ' ಸಿನಿಮಾದಲ್ಲಿಯೂ ಅದ್ಭುತವಾಗಿ ಅಭಿನಯಿಸಿದ್ದರು. ಆದರೂ ಅನಸೂಯ ಧರಿಸುವ ಬೋಲ್ಡ್ ಬಟ್ಟೆಗಳನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies