Nov 24, 2022, 12:27 PM IST
ಶ್ರೀಕಾಂತ್ ಹಾಗೂ ಊಹಾ ತಮ್ಮ 25 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಕನ್ನಡ ಹಾಗೂ ತೆಲುಗು ಚಿತ್ರರಂಗಕ್ಕೆ ಚಿರಪರಿಚಿತರಾದ ಬಳ್ಳಾರಿಯ ನಟ ಶ್ರೀಕಾಂತ್ ನಟಿ ಊಹಾ ಅವರನ್ನು ಮದುವೆ ಆಗಿದ್ದರು. ಆದರೆ 25 ವರ್ಷಗಳಿಂದ ಸಂಸಾರ ಮಾಡಿದವರಿಗೆ ಏನಾಯ್ತು ಎಂದು ಗೊತ್ತಿಲ್ಲ, ಇದ್ದಕ್ಕಿದಂತೆ ಡಿವೋರ್ಸ್ ಆಗಿದ್ದಾರೆ ಎಂದು ಟಾಲಿವುಡ್'ನಲ್ಲಿ ಸುದ್ದಿ ಆಗಿದೆ. ಈ ಜೋಡಿ ತುಂಬಾ ಸಿನಿಮಾದಲ್ಲಿ ನಟಿಸಿದ್ದಾರೆ. ಜೀವನದಲ್ಲಿ ಒಂದಾಗಿದ್ದ ಇವರ ಡಿವೋರ್ಸ್ ಸುದ್ದಿ ಸುಳ್ಳು ಆಗಲಿ ಎಂದು ಎಲ್ಲರು ಹೇಳುತ್ತಿದ್ದಾರೆ.
ಪ್ರಿಯಾಂಕಾ ಜೊತೆ ನಟಿಸಲ್ಲ ಎಂದು ನಿರ್ಧರಿಸಿದ್ದೇಕೆ ಅಕ್ಷಯ್ ಕುಮಾರ್; ಇಬ್ಬರ ನಡುವೆ ನಡೆದಿದ್ದೇನು?