Feb 17, 2023, 4:26 PM IST
ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾದ ಶೂಟಿಂಗ್'ಗಾಗಿ ಮಂಗಳೂರಿಗೆ ಬಂದಿದ್ದಾರೆ. ಆದ್ರೆ ಆ ಶೂಟಿಂಗ್ ಎಲ್ಲಿ ನಡೆಯುತ್ತಿದೆ ಅಂತ ಸರಿಯಾಗಿ ಗೊತ್ತಿರಲಿಲ್ಲ. ಈಗ ಆ ಸೀಕ್ರೆಟ್ ರಿವೀಲ್ ಆಗಿದೆ. ಜೈಲರ್ ಸಿನಿಮಾ ಚಿತ್ರೀಕರಣ ಕಾಂತಾರ ಅರಮನೆಯಲ್ಲಿ ನಡೆಯುತ್ತಿದೆ. ಜೈಲರ್'ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ನಟಿಸುತ್ತಿದ್ದು, ಶಿವಣ್ಣ ಹಾಗೂ ರಜನಿಕಾಂತ್ ದೃಶ್ಯವನ್ನು ಇದೇ ಮನೆಯಲ್ಲಿ ಶೂಟಿಂಗ್ ಮಾಡಲಾಗ್ತಿದೆಯಂತೆ. ಗುತ್ತಿನ ಮನೆಯ ಮುಖ್ಯ ದ್ವಾರವನ್ನು ಕ್ಲೋಸ್ ಮಾಡಿ ಮನೆಯ ಒಳಗಡೆ ಜೈಲರ್ ಚಿತ್ರೀಕರಣ ಮಾಡುತ್ತಿದ್ದಾರಂತೆ. ಕಾಂತಾರ ಸಿನಿಮಾವನ್ನು ಎರಡು ಭಾರಿ ನೋಡಿ ರಿಷಬ್ ಶೆಟ್ಟಿಗೆ ವಿಶ್ ಮಾಡಿದ್ರು ರಜನಿಕಾಂತ್.