ಈ ಇಬ್ಬರು ನಿರ್ದೇಶಕರು ನನಗೆ ತುಂಬಾ ಫೇವರಿಟ್; ಸುದೀಪ್

Apr 24, 2022, 6:00 PM IST

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಾಮ್ ಮತ್ತು ಉಪೇಂದ್ರ ಕಾಂಬಿನೇಷನ್ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಚಿತ್ರಕ್ಕೆ I am R ಹೆಸರಿಡಲಾಗಿದೆ. ಚಿತ್ರದ ಟೈಟಲ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಕಿಚ್ಚ 'ನಾನು ಇವತ್ತು ನಟನಾಗಿ ಇಲ್ಲಿ ಇದ್ದೀನಿ ಅಂದರೆ ಕಾರಣ ಉಪೇಂದ್ರ ಎಂದು ಸುದೀಪ್ ಹೇಳಿದ್ದಾರೆ. ಇನ್ನು ಇಲ್ಲಿಂದ ಮುಂಬೈಗೆ ಕರೆದುಕೊಂಡು ಹೋಗಿ ನನ್ನನ್ನು ಅಲ್ಲಿ ಪರಿಚಯಿಸಿದ್ದು ರಾಮ ಗೋಪಾಲ್ ವರ್ಮಾ. ಇಬ್ಬರು ನಿರ್ದೇಶಕರು ನನಗೆ ತುಂಬಾ ಫೇವರಿಟ್ ಎಂದು ಸುದೀಪ್ ಹೇಳಿದ್ದಾರೆ. ಇದೇ ಸಮಯದಲ್ಲಿ ಈ ಸಿನಿಮಾದಲ್ಲಿ ನಾನ್ಯಾಕೆ ಇಲ್ಲ ಎಂದು ಉರಿತಿದೆ ಎಂದು' ಕಿಚ್ಚ ಹೇಳಿದ್ದರು.