Dec 29, 2024, 12:52 PM IST
ಬೆಂಗಳೂರು(ಡಿ.29): ಅಮ್ಮ ನೋಡಬೇಕಿತ್ತು ಈ ಯಶಸ್ಸು.. ನೋವಿನಲ್ಲಿ ಕಿಚ್ಚನ ಮನಸು..! ಮನೆಯೇ ದೇಗುಲ.. ಕಿಚ್ಚನ ಸಾಮ್ರಾಜ್ಯಕ್ಕೆ ಅಮ್ಮನೇ ದೇವರು..! ಏನಾಗಲಿ ಮುಂದೆ ಸಾಗು ನೀ...ಕಿಚ್ಚನ ಎದೆಯಲ್ಲಿ ಅಮ್ಮನ ಧ್ವನಿ..! .. ಇದೇ ಈ ಹೊತ್ತಿನ ವಿಶೇಷ.. ಅಮ್ಮನ ಆಲಯ.. ನಾನು..
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಮೂವಿ ಮೆಗಾ ಓಪನಿಂಗ್ ಪಡೆದುಕೊಂಡಿದೆ. ಚಿತ್ರ ನೋಡಿದ ಫ್ಯಾನ್ಸ್ ಮ್ಯಾಕ್ಸ್ ಮ್ಯಾಕ್ಸಿಮಮ್ ಎಂಟರ್ಟೈನಿಂಗ್ ಆಗಿದೆ ಅಂತಿದಾರೆ. ಬಾಕ್ಸಾಫೀಸ್ನಲ್ಲೂ ಸಿನಿಮಾ ಕಮಾಲ್ ಮಾಡ್ತಾ ಇದೆ. ಈ ಸಂತೋಷದ ಸಮಯದಲ್ಲಿ ಕಿಚ್ಚನಿಗೆ ಕಾಡ್ತಿರೋದು ಅದೊಂದೇ ನೋವು. ಈ ಸಂಭ್ರಮ ನೋಡಲು ಅಮ್ಮನಿಲ್ಲವಲ್ಲ ಅನ್ನೋದು.
ಬೆಕ್ಕಿನಂತೆ ಸಿಂಹವನ್ನೇ ಮುದ್ದಾಡಿದ ಯುವತಿ; ನಡುರಸ್ತೆಯಲ್ಲಿಯೇ ಜಡೆಜಗಳ, ಮಹಿಳೆಯರ ಜಿದ್ದಾಜಿದ್ದಿ!
ಸುದೀಪ್ಗೆ ಚಿಕ್ಕವನಾಗಿದ್ದಾಗಲೇ ಅಮ್ಮನಿಗೆ ಒಂದು ವಿಶೇಷ ಉಡುಗೊರೆ ಕೊಟ್ಟಿದ್ರು. ಸುದೀಪ್ಗೆ ಅಮ್ಮ ಅಂದ್ರೆ ವಿಶೇಷ ಅಟ್ಯಾಚ್ಮೆಂಟ್. ಚಿಕ್ಕವಯಸ್ಸಿನಿಂದಲೂ ಅಮ್ಮನ ಜೊತೆಗೆ ವಿಶೇಷ ಅನುಬಂಧ. 7ನೇ ಕ್ಲಾಸ್ ಇದ್ದಾಗಲೇ ಅಮ್ಮನಿಗೆ ಒಂದು ಉಡುಗರೆ ಕೊಟ್ಟಿದ್ದ ಕಿಚ್ಚ ಅಮ್ಮನ ಮೊಗದಲ್ಲಿ ನಗು ತಂದಿದ್ರು.
ಸುದೀಪ್ರ ಎಲ್ಲಾ ಸಿನಿಮಾಗಳನ್ನೂ ತಾಯಿ ಸರೋಜಮ್ಮ ನೋಡಿದ್ರು. ಸಿನಿಮಾ ಅಷ್ಟೇ ಅಲ್ಲ ಬಿಗ್ ಬಾಸ್ ಶೋ, ಟಿವಿ ಶೋಗಳು ಎಲ್ಲವನ್ನೂ ನೋಡಿ ಸುದೀಪ್ ತಾಯಿ ಫೀಡ್ ಬ್ಯಾಕ್ ಕೊಡ್ತಾ ಇದ್ರು. ಆದ್ರೆ ಇದೇ ಮೊದಲ ಬಾರಿಗೆ ಸಿನಿಮಾ ಗೆದ್ದರೂ ಅಮ್ಮನಿಂದ ಪ್ರಶಂಸೆ ಸಿಕ್ಕಿಲ್ಲವಲ್ಲ ಅಂತ ಸುದೀಪ್ ಬೇಸರಗೊಂಡಿದ್ದಾರೆ.
ಅಮ್ಮ ನೋಡದ ಮೊದಲ ಸಿನಿಮಾ ಅಂತ ಬೇಸರ ಇದ್ದರೂ ಈ ಗೆಲುವು ಅಮ್ಮನ ಆಶಿರ್ವಾದ ಅಂದುಕೊಂಡಿದ್ದಾರೆ ಸುದೀಪ್.