Gowthami K | Updated: Mar 27, 2025, 4:25 PM IST
ಇಂಡಿಯನ್ ಸಿನಿಇಂಡಸ್ಟ್ರಿಯಲ್ಲಿ ಈಗ ನಂ.1 ನಟಿಮಣಿ ಅಂದ್ರೆ ಅದು ನೋ ಡೌಟ್ ರಶ್ಮಿಕಾ ಮಂದಣ್ಣ. ನಂ.1 ಪಟ್ಟಕ್ಕೇರಿರೋ ಈ ಕನ್ನಡತಿಗೆ ಒಂದು ಮಟ್ಟಕ್ಕೆ ಸವಾಲ್ ಹಾಕ್ತಾ ಇರೋದು ಮತ್ತೊಬ್ಬ ಕನ್ನಡದ ಹುಡುಗಿ ಶ್ರೀಲೀಲಾ. ಅದ್ರಲ್ಲೂ ಈ ವಾರ ಈ ಇಬ್ರು ನಟಿಯರ ಸಿನಿಮಾಗಳು ಮುಖಾಮುಖಿ ಆಗ್ತಾ ಇದ್ದು, ಸುಂದರಿಯರ ನುಡವೆ ಸವಾಲ್ ನಡೆಯಲಿದೆ.
ರಶ್ಮಿಕಾ ಸಿಕಂದರ್ ಮೂವಿ ಎದುರು ಶ್ರೀಲೀಲಾ ರಾಬಿನ್ಹುಡ್ ಬಿಡುಗಡೆಯಾಗುತ್ತಿದೆ. ಒಂದೇ ವಾರ ರಶ್ಮಿಕಾ ಮತ್ತು ಶ್ರೀಲೀಲಾ ನಟನೆಯ ಸಿನಿಮಾಗಳು ಬರ್ತಾ ಇದ್ದು, ಬಾಕ್ಸಾಫೀಸ್ನಲ್ಲಿ ಮುಖಾಮುಖಿ ಆಗ್ತಾ ಇವೆ. ಇಬ್ಬರು ಸುಂದರಿಯರ ಸವಾಲ್ ನಡುವೆ ಕಮಾಲ್ ಮಾಡೋದು ಯಾರು ಅನ್ನೋ ಪ್ರಶ್ನೆ ಎದುರಾಗಿದೆ.
ಮಾರ್ಚ್ 30ನೇ ತಾರೀಖು ಸಲ್ಮಾನ್ ಖಾನ್ ನಟನೆಯ ಸಿಕಂದರ್ ಮೂವಿ ರಿಲೀಸ್ ಆಗ್ತಾ ಇದೆ. ಅನಿಮಲ್ , ಛಾವಾ ಸಕ್ಸಸ್ ಮೂಲಕ ಬಾಲಿವುಡ್ನಲ್ಲೂ ಗೆಲುವಿನ ಬಾವುಟ ಹಾರಿಸಿರೋ ರಶ್ಮಿಕಾ ಸಿಕಂದರ್ ಮೂಲಕ ಮತ್ತೊಮ್ಮೆ ಬಾಕ್ಸಾಫೀಸ್ನಲ್ಲಿ ಕಮಾಲ್ ನಿರೀಕ್ಷೆಯಲ್ಲಿದ್ದಾರೆ.
ಇನ್ನೂ ಸಿಕಂದರ್ ಮೂವಿಗೂ ಎರಡು ದಿನ ಮೊದಲು ಎರಡು ದಿನ ಮೊದಲು ಟಾಲಿವುಡ್ನಲ್ಲಿ ರಾಬಿನ್ ಹುಡ್ ಸಿನಿಮಾ ತೆರೆಗೆ ಬರ್ತಾ ಇದೆ. ನಿತಿನ್ ನಟನೆಯ ಈ ಆ ಕ್ಷನ್ ಕಾಮಿಡಿ ಡ್ರಾಮಾ ಮೂವಿಯಲ್ಲಿ ಶ್ರೀಲೀಲಾ ನಾಯಕಿ.ಅಸಲಿಗೆ ಟಾಲಿವುಡ್ನಲ್ಲಿ ರಶ್ಮಿಕಾ ಸ್ಥಾನ ತುಂಬುವ ಹಂತಕ್ಕೆ ಬಂದಿರೋ ಶ್ರೀಲೀಲಾ ಬಾಲಿವುಡ್ಗೂ ಕಾಲಿಟ್ಟಾಗಿದೆ. ಮುಂದಿನ ದಿನಗಳಲ್ಲಿ ರಶ್ಮಿಕಾ ನಂ.1 ಸ್ಥಾನಕ್ಕೆ ಶ್ರೀಲೀಲಾ ಪೈಪೋಟಿ ಕೊಟ್ಟರೂ ಅಚ್ಚರಿ ಏನಿಲ್ಲ