Spider Man Dance: 'ರಾ ರಾ ಸಾಮಿ' ಹಾಡಿಗೆ ರಶ್ಮಿಕಾರಂತೆ ಸ್ಟೆಪ್ ಹಾಕಿದ ಸ್ಪೈಡರ್​ ಮ್ಯಾನ್

Spider Man Dance: 'ರಾ ರಾ ಸಾಮಿ' ಹಾಡಿಗೆ ರಶ್ಮಿಕಾರಂತೆ ಸ್ಟೆಪ್ ಹಾಕಿದ ಸ್ಪೈಡರ್​ ಮ್ಯಾನ್

Suvarna News   | Asianet News
Published : Jan 12, 2022, 03:01 PM IST

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿವೆ. ಇದೀಗ ಈ ಚಿತ್ರದ ಹಾಡಿಗೆ ರಶ್ಮಿಕಾರನ್ನು ನಾಚಿಸುವಂತೆ ಸ್ಪೈಡರ್ ಮ್ಯಾನ್ ಹೆಜ್ಜೆ ಹಾಕಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಸುಕುಮಾರ್ (Sukumar) ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ಪುಷ್ಪ' (Pushpa) ಚಿತ್ರ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ವ್ಯವಹಾರ ಮಾಡಿದೆ. ಅಲ್ಲದೆ ಒಟಿಟಿಯಲ್ಲೂ (OTT) ಬಿಡುಗಡೆಯಾಗಿ ದೊಡ್ಡ ಹೆಸರನ್ನು ಮಾಡಿದೆ. ಈ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಧೂಳೆಬ್ಬಿಸಿವೆ. ಇದೀಗ ಈ ಚಿತ್ರದ ಹಾಡಿಗೆ ರಶ್ಮಿಕಾರನ್ನು ನಾಚಿಸುವಂತೆ ಸ್ಪೈಡರ್ ಮ್ಯಾನ್ (Spider Man) ಹೆಜ್ಜೆ ಹಾಕಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral) ಆಗಿದೆ. 

Pushpa Song: ಸಾಮಿ ಸಾಮಿ ಹಾಡಿಗೆ ಟ್ಯೂನ್ ಹಾಕಿದ ವಾದ್ಯದವರು

'ಪುಷ್ಪ' ಚಿತ್ರದ 'ರಾ ರಾ ಸಾಮಿ' ಹಾಡಿಗೆ ಸ್ಪೈಡರ್ ಮ್ಯಾನ್ ವೇಷ ಧರಿಸಿದ ವ್ಯಕ್ತಿಯು ಹೆಜ್ಜೆ ಹಾಕಿದ್ದು, ಅವರ ಜೊತೆಗೆ ಸಾಂತಾ ಕ್ಲಾಸ್ ಉಡುಗೆಗಳಲ್ಲಿ ಅನೇಕ ಪ್ರೇಕ್ಷಕರು ಸೇರಿಕೊಂಡು ಕುಣಿದಿದ್ದಾರೆ. ಒಂದು ಗೋಡೆಯ ಮೇಲೆ ಸ್ಪೈಡರ್ ಮ್ಯಾನ್ ನಿಂತುಕೊಂಡು ಹಾಡಿಗೆ ಡ್ಯಾನ್ಸ್ ಮಾಡಿದರೆ, ಪ್ರೇಕ್ಷಕರು ಕೆಳಗೆ ನಿಂತು ಡ್ಯಾನ್ಸ್ ಮಾಡಿದ್ದನ್ನು ನೋಡಬಹುದಾಗಿದೆ. ಮಲಯಾಳಂ ಹಾಡನ್ನು 'ರಾ ರಾ ಸಾಮಿ' ಟ್ಯೂನ್‌ಗೆ ಬರೆದು ಹಾಡಿರುವಂತೆ ಕೇಳಿ ಬರುತ್ತಿದೆ. ಹಾಗೂ ಈ ವಿಡಿಯೋವನ್ನು ಅಲ್ಲು ಅರ್ಜುನ್ ಅವರ ಕಿರಿಯ ಸಹೋದರ ನಟ ಅಲ್ಲು ಸಿರೀಶ್ (Allu Sirish) ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
Read more