ಆಂಧ್ರ  ಶಾಸಕನ ಬಯೋಪಿಕ್​ನಲ್ಲಿ ಶಿವಣ್ಣ: 'ಗುಮ್ಮಡಿ ನರಸಯ್ಯ'ನಾದ ಹ್ಯಾಟ್ರಿಕ್ ಹೀರೋ!

ಆಂಧ್ರ ಶಾಸಕನ ಬಯೋಪಿಕ್​ನಲ್ಲಿ ಶಿವಣ್ಣ: 'ಗುಮ್ಮಡಿ ನರಸಯ್ಯ'ನಾದ ಹ್ಯಾಟ್ರಿಕ್ ಹೀರೋ!

Published : Oct 24, 2025, 04:22 PM IST

ದೀಪಾವಳಿಗೆ ಶಿವರಾಜ್​ಕುಮಾರ್ ನಟನೆಯ 2 ಹೊಸ ಸಿನಿಮಾ ಅನೌನ್ಸ್ ಆಗಿವೆ. ಅದ್ರಲ್ಲೂ ಶಿವಣ್ಣ ಒಬ್ಬ ಹೆಸರಾಂತ ರಾಜಕಾರಣಿಯ ಬಯೋಪಿಕ್ ಸಿನಿಮಾದಲ್ಲಿ ನಟಿಸ್ತಾ ಇದ್ದು, ಅದು ಪ್ಯಾನ್ ಇಂಡಿಯಾ ಸದ್ದು ಮಾಡೋ ಸೂಚನೆ ನೀಡಿದೆ.

ಸೆಂಚುರಿ ಸ್ಟಾರ್ ಶಿವಣ್ಣ ಡಜನ್​ ಗಟ್ಟಳೇ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ನಡುವೆ ದೀಪಾವಳಿಗೆ ಶಿವರಾಜ್​ಕುಮಾರ್ ನಟನೆಯ 2 ಹೊಸ ಸಿನಿಮಾ ಅನೌನ್ಸ್ ಆಗಿವೆ. ಅದ್ರಲ್ಲೂ ಶಿವಣ್ಣ ಒಬ್ಬ ಹೆಸರಾಂತ ರಾಜಕಾರಣಿಯ ಬಯೋಪಿಕ್ ಸಿನಿಮಾದಲ್ಲಿ ನಟಿಸ್ತಾ ಇದ್ದು, ಅದು ಪ್ಯಾನ್ ಇಂಡಿಯಾ ಸದ್ದು ಮಾಡೋ ಸೂಚನೆ ನೀಡಿದೆ. ಯೆಸ್ ದೀಪಾವಳಿಗೆ ಶಿವಣ್ಣನ ಎರಡು ಹೊಸ ಸಿನಿಮಾ ಅನೌನ್ಸ್ ಆಗಿವೆ. ಪದವಿ ಪೂರ್ವ ಸಿನಿಮಾ ನಿರ್ದೇಶನ ಮಾಡಿದ್ದ ಹರಿ ಜಯಣ್ಣ ನಿರ್ದೇಶನದಲ್ಲಿ ಶಿವಣ್ಣ 135 ಮೂವಿ ಬರಲಿದ್ದು ಅದರ ಪೋಸ್ಟರ್ ರಿಲೀಸ್ ಆಗಿದೆ. ಇದರ ಜೊತೆಗೆ ‘ಗುಮ್ಮಡಿ ನರಸಯ್ಯ'  ಫಸ್ಟ್ ಲುಕ್ ರಿಲೀಸ್ ಆಗಿದ್ದು ಶಿವಣ್ಣನ ಲುಕ್ ನೋಡಿ ಫ್ಯಾನ್ಸ್ ವಾರೇವ್ಹಾ ಅಂತಿದ್ದಾರೆ. ಗುಮ್ಮಡಿ ನರಸಯ್ಯ' ಒಂದು ಬಯೋಪಿಕ್ ಆಗಿದ್ದು, ತೆಲಂಗಾಣದ ಯಲ್ಲಂದು ವಿಧಾನಸಭಾ ಕ್ಷೇತ್ರದಿಂದ   ಸ್ವತಂತ್ರ ಅಭ್ಯರ್ಥಿಯಾಗಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗುಮ್ಮಡಿ ನರಸಯ್ಯ ಅವರ ಜೀವನ ಚರಿತ್ರೆಯನ್ನ ಇದು ತೆರೆಗೆ ತರಲಿದೆ.

ಶಿವಣ್ಣ ಇಲ್ಲಿ  ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ. ರಿಯಲ್ ನರಸಯ್ಯನನ್ನ ನೋಡಿದವರು ಶಿವಣ್ಣನ ಲುಕ್ ಥೇಟ್ ಅವರಂತೆಯೇ ಇದೆ ಅಂತಿದ್ದಾರೆ. ಹೌದು ಗುಮ್ಮಡಿ ನರಸಯ್ಯ ತನ್ನ ಸರಳತೆಗೆ ಹೆಸರಾಗಿದ್ದ ಕಮ್ಯುನಿಸ್ಟ್ ರಾಜಕಾರಣಿ. ವಿಧಾನಸಭೆಗೆ ಗುಮ್ಮಡಿ ನರಸಯ್ಯ  ಸೈಕಲ್ ನಲ್ಲಿ ಬರ್ತಾ ಇದ್ರಂತೆ.  ಐದು ಬಾರಿ ಶಾಸಕರಾಗಿದ್ದರೂ ಇವರು ಸೈಕಲ್ ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆ ಮನೆಯಲ್ಲಿಯೇ ವಾಸ ಮಾಡ್ತಿದ್ದ ಈ ಶುದ್ದಹಸ್ತ, ಸರಳ ರಾಜಕಾರಣಿಯ ಬಯೋಪಿಕ್​ನ  ತೆರೆಗೆ ತರಲಾಗ್ತಾ ಇದೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಎಲ್ಲರ ಗಮಸನೆಳೆದಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಎನ್ ಸುರೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದು, ನಿರ್ದೇಶನದ ಹೊಣೆ ಪರಮೇಶ್ವರ್ ಹಿವರಾಲೆ ಅವರದ್ದು. ಒಟ್ಟಾರೆ ಶಿವಣ್ಣ ದೀಪಾವಳಿಗೆ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದು, ವಿಭಿನ್ನ ಪಾತ್ರದ ಮೂಲಕ ನಿಮ್ಮೆದುರು ಬರ್ತಿನಿ ಅಂದಿದ್ದಾರೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more