ಅಮ್ಮನನ್ನು ನೋಡುತ್ತಿದ್ದಂತೆ ಕಾಲುಮುಟ್ಟಿ ನಮಸ್ಕರಿಸಿದ ಶಿಲ್ಪಾ ಶೆಟ್ಟಿ ಸಹೋದರಿ; ಅಭಿಮಾನಿಗಳ ಮೆಚ್ಚುಗೆ

Jul 20, 2022, 5:50 PM IST

ಬಾಲಿವುಡ್ ನಟಿ ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಮತ್ತು ಸಹೋದರಿ ಶಮಿತಾ ಶೆಟ್ಟಿ ಇಬ್ಬರು ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ. ಮುಂಬೈನ ಶಿಲ್ಪಾ ಶೆಟ್ಟಿ ನಿವಾಸದಲ್ಲಿ ಸಹೋದರಿಯರು ಕಾಣಿಸಿಕೊಂಡಿದ್ದಾರೆ. ಇಬ್ಬರು ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ತಾಯಿ ಸುನಂದಾ ಶೆಟ್ಟಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ಶಮಿತಾ ಶೆಟ್ಟಿ ತಾಯಿಯನ್ನು ನೋಡುತ್ತಿದ್ದಂತೆ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಅಮ್ಮನ್ನು ಪ್ರೀತಿಯಿಂದ ಹಗ್ ಮಾಡಿ ಕಾಲಿಗೆ ನಮಸ್ಕರಿಸಿದ್ದಾರೆ. ಶಮಿತಾ ಮತ್ತು ಶಿಲ್ಪಾ ಇಬ್ಬರು ಮಕ್ಕಳನ್ನು ತಬ್ಬಿ ಮುದ್ದಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಶಮಿತಾ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಶಮಿತಾ ಕೊನೆಯದಾಗಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು. ಬಿಗಿ ಮನೆಯಲ್ಲಿ ಸಹ ಸ್ಪರ್ಧಿ ರೇಕೇಶ್ ಬಾಪಟ್ಟ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಇತ್ತು. ಆದರೀಗ ಶಮಿತಾ, ರಾಕೇಶ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶಮಿತಾ ಇನ್ನು ಮದುವೆಯಾಗದೇ  ಸಿಂಗಲ್ ಆಗಿದ್ದಾರೆ.