ಆ ಕಾಲದಲ್ಲೇ ಗಣೇಶ್ 4 ಸಿನಿಮಾಗಳು ನೂರು ಕೋಟಿ ದಾಟಿತ್ತು ಎಂದು ಹಿರಿಯ ಪತ್ರಕರ್ತ ಬಾ ನ ಸುಬ್ರಹ್ಮಣ್ಯ ಅವರು ಹೇಳಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲ್ಲಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಹಾಡಿನ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಬಾನದಾರಿಯಲ್ಲಿ ಇದೀಗ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಸಿನಿಮಾತಂಡ ಪ್ರೆಸ್ ಮೀಟ್ ಮಾಡಿದ್ದು ಒಂದಿಷ್ಟು ವಿಚಾರಗಳನ್ನು ಶೇರ್ ಮಾಡಿದೆ. ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಬಾ ನ ಸುಬ್ರಹ್ಮಣ್ಯ ಮಾತನಾಡಿ ಅನೇಕ ವಿಚಾರಗಳನ್ನು ಬಿಚ್ಚಿಟ್ಟರು. ಕನ್ನಡ ಸಿನಿಮಾ ಚಿತ್ರಗಳನ್ನು ಬೆಳೆಸಿದ್ದು ಕನ್ನಡ ಸಿನಿಮಾರಂಗ ಜನರಿಗೆ ಹತ್ತಿರವಾಗಿದ್ದು ಪ್ರವಾಹ ಮಿತ್ರ ಯಾತ್ರೆ ಎಂದು ಹೇಳಿದರು. ಕನ್ನಡ ಸಿನಿಮಾಗಳು ಇವತ್ತು ತುಂಬಾ ಚೆನ್ನಾಗಿ ಆಗುತ್ತಿದೆ. ಕಳೆದ ವರ್ಷ ಹಬ್ಬವಾಗಿದೆ. ಇದಕ್ಕೆ ಪೀಠಿಕೆ ಹಾಕಿದ್ದು ಗಣೇಶ್ ಅವರ ಮುಂಗಾರು ಮಳೆ ಸಿನಿಮಾ. 70 ಕೋಟಿ ಕ್ಲಬ್ ಸೇರಿದ್ದು ಗಣೇಶ್ ಸಿನಿಮಾ. ಗಣೇಶ್ 4 ಸಿನಿಮಾ 100 ಕೋಟಿ ದಾಟಿತ್ತು ಎಂದು ಹೇಳಿದ್ದಾರೆ.