ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಸುಗ್ಗಿ ಸಂಭ್ರಮ:  ಕಿಚ್ಚು ಹಾಯಿಸಿ ಹೊಸದಾರಿ ಹಿಡಿಲು ದರ್ಶನ್ ಪ್ಲಾನ್

ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಸುಗ್ಗಿ ಸಂಭ್ರಮ: ಕಿಚ್ಚು ಹಾಯಿಸಿ ಹೊಸದಾರಿ ಹಿಡಿಲು ದರ್ಶನ್ ಪ್ಲಾನ್

Published : Jan 14, 2025, 11:26 AM IST

ಪ್ರತಿವರ್ಷ ದರ್ಶನ್ ಮೈಸೂರಿನ ಫಾರ್ಮ್​ಹೌಸ್​​ನಲ್ಲಿ ಸಂಕ್ರಾಂತಿ ಸೆಲೆಬ್ರೇಷನ್ ಜೋರಾಗಿರುತ್ತೆ. ಈ ಸಾರಿ ಕೂಡ ದಾಸನಿಗೆ ಮೈಸೂರಿಗೆ ಹೋಗೋದಕ್ಕೆ ಕೋರ್ಟ್ ಅನುಮತಿ ಕೊಟ್ಟಿದ್ದು, ಫಾರ್ಮ್​ ಹೌಸ್​ನಲ್ಲಿ ಸುಗ್ಗಿ ಮಾಡೋಕೆ ದರ್ಶನ್ ಪಡೆ ಸಜ್ಜಾಗಿದೆ.

ಪ್ರತಿವರ್ಷ ದರ್ಶನ್ ಮೈಸೂರಿನ ಫಾರ್ಮ್​ಹೌಸ್​​ನಲ್ಲಿ ಸಂಕ್ರಾಂತಿ ಸೆಲೆಬ್ರೇಷನ್ ಜೋರಾಗಿರುತ್ತೆ. ಈ ಸಾರಿ ಕೂಡ ದಾಸನಿಗೆ ಮೈಸೂರಿಗೆ ಹೋಗೋದಕ್ಕೆ ಕೋರ್ಟ್ ಅನುಮತಿ ಕೊಟ್ಟಿದ್ದು, ಫಾರ್ಮ್​ ಹೌಸ್​ನಲ್ಲಿ ಸುಗ್ಗಿ ಮಾಡೋಕೆ ದರ್ಶನ್ ಪಡೆ ಸಜ್ಜಾಗಿದೆ. ಸಂಕ್ರಾಂತಿಗೆ ಕಿಚ್ಚು ಹಾಯಿಸಿ ಇಲ್ಲಿಂದ ಹೊಸದಾರಿ ಹಿಡಿಯೋಕೆ ದಾಸ ಸಜ್ಜಾಗಿದ್ದಾನೆ.  ಯೆಸ್ ಈ ಸಾರಿ ದರ್ಶನ್ ಫಾರ್ಮ್ ಹೌಸ್​ನಲ್ಲಿ ಭರ್ಜರಿ ಸಂಕ್ರಾಂತಿ ಸೆಲೆಬ್ರೇಷನ್ ನಡೆಯಲಿದೆ. ಜೈಲಿಂದ ಹೊರಬಂದ ಮೇಲೆ ದರ್ಶನ್​ಗೆ ಮೊದಲ ಹಬ್ಬ ಇದು. ಹೊಸ ವರ್ಷದ ಮೊದಲ ಹಬ್ಬವನ್ನ ಭರ್ಜರಿಯಾಗಿ ಸೆಲೆಬ್ರೇಟ್ ಮಾಡಬೇಕು ಅಂತ ದಾಸನ ಪಡೆ ಸಜ್ಜಾಗಿದೆ. ಅಸಲಿಗೆ ಪ್ರತಿವರ್ಷ ದರ್ಶನ್ ಫಾರ್ಮ್ ಹೌಸ್ ನಲ್ಲಿ ಸಂಕ್ರಾಂತಿ ಆಚರಣೆ ಜೋರಾಗಿರುತ್ತೆ. ಇಡೀ ಫಾರ್ಮ್​ ಹೌಸ್​ನ ಸಿಂಗರಿಸಿ, ಪ್ರಾಣಿಗಳಿಗೆ ಕಿಚ್ಚು ಹಾಯಿಸಲಾಗುತ್ತೆ. ಕಳೆದ ವರ್ಷವಂತೂ ಕಾಟೇರ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದ ದರ್ಶನ್ ಭರ್ಜರಿ ಸೆಲೆಬ್ರೇಷನ್ ಮಾಡಿದ್ರು.  ತಮ್ಮ ನೆಚ್ಚಿನ ಕುದುರೆಯನ್ನ ಹಿಡಿದು ಖುದ್ದು ಕಿಚ್ಚು ಹಾಯಿಸಿದ್ರು. ಫಾರ್ಮ್ ಹೌಸ್​ನಲ್ಲಿರೋ ಪ್ರಾಣಿಗಳನ್ನೆಲ್ಲಾ ಸಿಂಗರಿಸಿದ್ರು. ಇಡೀ ಫಾರ್ಮ್ ಹೌಸ್​​ನಲ್ಲಿ ಸುಗ್ಗಿ ಸಂಭ್ರಮ ಮನೆ ಮಾಡಿತ್ತು. ಈ ಸಾರಿ ಕೂಡ ಇದೇ ರೀತಿ ಜೋರಾಗಿ ಸೆಲೆಬ್ರೇಷನ್ ಮಾಡೋಣ ಅಂತ ಪ್ಲಾನ್ ಮಾಡಲಾಗಿದೆ. ಅದಕ್ಕಾಗಿ ಜೋರು ತಯಾರಿ ನಡೀತಾ ಇದೆ.

ಅಸಲಿಗೆ ದರ್ಶನ್​ಗೆ ಕೋರ್ಟ್ ಬೇಲ್ ಕೊಟ್ಟಿದ್ರೂ ನಾನಾ ಷರತ್ತುಗಳನ್ನ ವಿಧಿಸಿದೆ. ಅದ್ರಲ್ಲೂ ಸಿಟಿ ಸೆಷೆನ್ಸ್ ಕೋರ್ಟ್ ಲಿಮಿಟ್ಸ್​​ನಿಂದ ಆಚೆ ಹೋಗೋದಕ್ಕೆ ಅನುಮತಿ ಪಡೆಯಬೇಕಾಗುತ್ತೆ. ಕಳೆದ ಶುಕ್ರವಾರ ಕೋರ್ಟ್ ಎದುರು ಹಾಜರಾಗಿ 5 ದಿನಗಳ ಕಾಲ ಮೈಸೂರಿಗೆ ಹೋಗೋದಕ್ಕೆ ಅನುಮತಿ ಪಡೆದುಕೊಂಡಿರೋ ದರ್ಶನ್, ನಿರಾತಂಕವಾಗಿ ಹಬ್ಬ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ. ಹೌದು ಹಬ್ಬ ಸೆಲೆಬ್ರೇಟ್ ಮಾಡಿ 15ನೇ ತಾರೀಖು ಹಾಸ್ಪಿಟಲ್​ಗೆ ಹೋಗಿ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಿಸಲಿರೋ ದರ್ಶನ್, ಸರ್ಜರಿ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ. ವೈದ್ಯರು ಸರ್ಜರಿ ಮಾಡಿಸಲೇಬೇಕು ಅಂದರೆ ಸದ್ಯದಲ್ಲೇ ಸರ್ಜರಿ ಮಾಡಿಸೋಕೆ ಪ್ಲಾನ್ ಮಾಡಿದ್ದಾರೆ. ಇನ್ನೂ ಸರ್ಜರಿ ಮಾಡಿಸಿದ್ರೆ ಎರಡು ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತೆ. ಸೋ ಮಾರ್ಚ್​ನಿಂದ ತಾನು ಶೂಟಿಂಗ್​ಗೆ​ ಬರ್ತೀನಿ ಅಂತ ಡೆವಿಲ್ ಟೀಂಗೆ ದರ್ಶನ್ ಕಡೆಯಿಂದ ಸೂಚನೆ ಹೋಗಿದೆ. ಸೋ ಡೆವಿಲ್ ತಂಡ ಕೂಡ ತಯಾರಿ ಮಾಡಿಕೊಳ್ತಾ ಇದೆ.

ಒಟ್ಟಾರೆ ಆಗಿದ್ದು ಆಗಿ ಹೋಯಿತು, ಸಂಕ್ರಾಂತಿಯಿಂದ ಹೊಸ ಬದುಕು ಆರಂಭಿಸೋಣ ಅಂತ ದರ್ಶನ್ ಸಿದ್ದವಾದಂತಿದೆ. ಆದ್ರೆ ಕಾನೂನಿನ ಕುಣಿಕೆಯಿಂದ ಅಷ್ಟು ಸುಲಭವಾಗಿ ಬಚಾವ್ ಆಗೋದಕ್ಕೆ ಸಾಧ್ಯನಾ..? ಕಿಚ್ಚ ಹಾಯಿಸಿ ಎಳ್ಳು ಬೆಲ್ಲ ತಿಂದ ಮಾತ್ರ ಮಾಡಿದ ಪಾಪ ಮುಚ್ಚಿ ಹೋಗುತ್ತಾ..

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್