Dec 23, 2024, 4:35 PM IST
ಬೆಂಗಳೂರು: ಚಿಕಿತ್ಸೆಗಾಗಿ ಅಮೇರಿಕಕ್ಕೆ ತೆರಳಿರೋ ಶಿವರಾಜ್ಕುಮಾರ್ ಮಿಯಾಮಿ ಕ್ಯಾನ್ಸರ್ ಇನ್ಸ್ಟೀಟ್ಯೂಟ್ಗೆ ದಾಖಲಾಗಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ಶಿವಣ್ಣನಿಗೆ ಸರ್ಜರಿ ನಡೆಯಲಿದೆ. ಮುಂದಿನ ಒಂದೂವರೇ ತಿಂಗಳು ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ ಶಿವಣ್ಣ.
ಅಸಲಿಗೆ ಶಿವಣ್ಣ ಚಿತ್ರರಂಗಕ್ಕೆ ಬಂದಾಗಿನಿಂದ ಇಲ್ಲಿವರೆಗೂ ಇಷ್ಟು ಸುಧೀರ್ಘವಾಗಿ ರಜೆ ತೆಗೆದುಕೊಂಡಿರೋದು ಇದೇ ಮೊದಲು. 38 ವರ್ಷಗಳಿಂದಲೂ ಶಿವಣ್ಣನ ದಿನ ಆರಂಭವಾಗ್ತಾ ಇದ್ದಿದ್ದೇ ಮೇಕಪ್ ಹಚ್ಚುವ ಮೂಲಕ.