
ದೊಡ್ಮನೆ ದೊರೆ, ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ಒಂದು ದೊಡ್ಡ ಅಗ್ನಿ ಪರೀಕ್ಷೆ ಗೆದ್ದು ಮರಳಿ ಬಂದಿದ್ದಾರೆ. ಕಳೆದ ತಿಂಗಳು ಶಿವಣ್ಣ ತಮ್ಮನ್ನ ಕಾಡ್ತಾ ಇದ್ದ ಮೂತ್ರಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯೋದಕ್ಕೆ ಅಮೇರಿಕಕ್ಕೆ ಹೊರಟು ನಿಂತಿದ್ರು. ಅಮೇರಿಕ ಮಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಿವಣ್ಣನ ಟ್ರೀಟ್ಮೆಂಟ್‌ಗೆ ವ್ಯವಸ್ಥೆಯಾಗಿತ್ತು. ಕ್ಯಾನ್ಸರ್ ಅನ್ನೋ ಹೆಸರು ಕೇಳಿಯೇ ಪ್ಯಾನ್ಸ್ ಕಂಗಾಲಾಗಿದ್ರು.
ಕನ್ನಡ ಚಿತ್ರಾಭಿಮಾನಿಗಳ ಪ್ರೀತಿಯ ದೊರೆ, ದೊಡ್ಮನೆ ದೊಡ್ಮಗ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೇರಿಕಗೆ ಹೋದಾಗಿನಿಂದಲೂ ಫ್ಯಾನ್ಸ್‌ಗೆ ಜೀವದಲ್ಲಿ ಜೀವ ಇರಲಿಲ್ಲ. ಆದ್ರೆ ಶಿವಣ್ಣ ಅಂಥಾ ಕ್ಯಾನ್ಸರ್ ಮಾರಿ ಹಾಕಿದ ಸವಾಲ್‌ಗೆ ಆನ್ಸರ್ ಕೊಟ್ಟು ಗುಣಮುಖರಾಗಿ ಎದ್ದು ಬಂದಿದ್ದಾರೆ.
ಇದೀಗ ಮನೆಗೆ ಮರಳಿರೋ ದೊಡ್ಮನೆ ದೊರೆಗೆ ಫ್ಯಾನ್ಸ್ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ಶಿವಣ್ಣ ಕೂಡ ನಾನು ಫಸ್ಟ್ ಕ್ಲಾಸ್ ಆಗಿದ್ದೀನಿ ಮತ್ತೆ ಬಣ್ಣ ಹಚ್ತಿನಿ ರೆಡಿಯಾಗಿ ಅಂದಿದ್ದಾರೆ.