ಸೀರೆಯಲ್ಲಿ ಮಿಂಚಿದ ರಚಿತಾ ರಾಮ್; ವೈರಲ್ ವಿಡಿಯೋ ನೋಡಿದ್ರಾ?

May 5, 2022, 2:23 PM IST

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸೀರೆಯಲ್ಲಿ ಮಿಂಚಿದ್ದಾರೆ. ಸೀರೆಲಿ ಹುಡುಗಿನ ನೋಡಲೇಬಾರದು ಎಂದು ಸೊಂಟ ಬಳುಕಿಸಿದ್ದ ರಚಿತಾ ಈಗ ಮತ್ತೆ ಸೀರೆಯಲ್ಲಿ ಬಳಕುತ್ತಾ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದಾರೆ. ಬಹಳ ದಿನಗಳ ನಂತ್ರ ಸಿಂಪಲ್ ಸೀರೆಯುಟ್ಟು ರಚಿತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ರಚಿತಾ ಸೀರೆಯಲ್ಲಿ ಮಿಂಚುತ್ತಿರೋ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ. ಅಭಿಮಾನಿಗಳು ರಚಿತಾನಾ ಸೀರೆಯಲ್ಲಿ ನೋಡಿ ಫಿದಾ ಆಗಿದ್ದಾರೆ.