ದೀಪಿಕಾ ಪಡುಕೋಣೆ ಧಿಮಾಕು! ರುಕ್ಕುಗೆ ಖುಲಾಯಿಸಿದ ಲಕ್ಕು! ಸ್ಪಿರಿಟ್ ಮೂವಿಯಿಂದ ದೀಪಿಕಾ ಔಟ್!

ದೀಪಿಕಾ ಪಡುಕೋಣೆ ಧಿಮಾಕು! ರುಕ್ಕುಗೆ ಖುಲಾಯಿಸಿದ ಲಕ್ಕು! ಸ್ಪಿರಿಟ್ ಮೂವಿಯಿಂದ ದೀಪಿಕಾ ಔಟ್!

Published : May 26, 2025, 02:23 PM IST

ದೀಪಿಕಾ ಪಡುಕೋಣೆ ಸ್ಪಿರಿಟ್ ಸಿನಿಮಾದಿಂದ ಹೊರಬಿದ್ದ ನಂತರ, ರುಕ್ಮಿಣಿ ವಸಂತ್ ಪ್ರಭಾಸ್ ಅವರೊಂದಿಗೆ ನಟಿಸಲು ಆಯ್ಕೆಯಾಗಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ನಟನೆಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಸಿನಿಮಾದಿಂದ ದೀಪಿಕಾ ಪಡುಕೋಣೆ ಔಟ್ ಆದ ಸುದ್ದಿ ಸಿನಿಲೋಕದಲ್ಲಿ ಸದ್ದು ಮಾಡಿತ್ತು. ಈಗ ಈ ಸಿನಿಮಾಗೆ ಹೊಸ ನಾಯಕಿಯ ಎಂಟ್ರಿಯಾದ ಸುದ್ದಿ ಕೂಡ ಸದ್ದು ಮಾಡ್ತಾ ಇದೆ. ಅಷ್ಟಕ್ಕೂ ಸ್ಪಿರಿಟ್ ಮೂವಿನಲ್ಲಿ ಪ್ರಭಾಸ್ ಜೊತೆಯಾಗೋ ಲಕ್ಕು ಖುಲಾಯಿಸಿರೋದು ರುಕ್ಮಿಣಿ ವಸಂತ್​ಗೆ.

ಯೆಸ್ ಡಾರ್ಲಿಂಗ್ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಜೋಡಿಯ ಮೋಸ್ಟ್ ಅವೇಟೆಡ್ ಮೂವಿ ಸ್ಪಿರಿಟ್ ಬಗ್ಗೆ ಸಿನಿಪ್ರಿಯರಲ್ಲಿ ದೊಡ್ಡ ಕುತೂಹಲ ಇದೆ. ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ಮತ್ತು ಅನಿಮಲ್ ನಂತಹ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರೋ ಸಂದೀಪ್ ರೆಡ್ಡಿ ವಂಗಾ ಪ್ರಭಾಸ್ ಜೊತೆಗೆ ಅದೆನ್ನಿಂತಾ ಸಿನಿಮಾ ಮಾಡಬಹುದು ಅಂತ ಫ್ಯಾನ್ಸ್ ಕುತೂಹಲದಿಂದ ಕಾಯ್ತಾ ಇದ್ದಾರೆ.

ಈ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾಗಿದ್ರು. ದೀಪಿಕಾ ಪ್ರಗ್ನೆನ್ಸಿಗಾಗಿ ಚಿತ್ರತಂಡ ಸಾಕಷ್ಟು ಸಮಯ ಕಾದಿತ್ತು ಕೂಡ. ಆದ್ರೆ ಕೊನೆಹಂತದಲ್ಲಿ ದೀಪಿಕಾ ಸಿನಿಮಾದಿಂದ ಔಟ್ ಆದ್ರು.  ಅಷ್ಟಕ್ಕೂ ದೀಪಿಕಾ ಈ ಸಿನಿಮಾದಿಂದ ಔಟ್ ಆಗ್ಲಿಕ್ಕೆ ಡಿಪ್ಪಿಯ ಅನ್​ಪ್ರೊಫೇಷನಲ್ ಬೇಡಿಕೆಗಳು ಕಾರಣ ಅಂತ ಸುದ್ದಿಯಾಗಿದೆ. ದೀಪಿಕಾ ಪಡುಕೋಣೆ ಹಾಕಿರೋ ಕಂಡೀಷನ್ಸ್​​ನಲ್ಲಿ ದುಬಾರಿ ಸಂಭಾವನೆ ಜೊತೆಗೆ ಚಿತ್ರದಿಂದ ಬರುವ ಲಾಭದಲ್ಲಿ ಪಾಲು ಕೊಡಬೇಕು ಅಂತ ಷರತ್ತು ಹಾಕಿದ್ರಂತೆ. ಜೊತೆಗೆ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡೋದು , ಅದ್ರಲ್ಲಿ ತಯಾರಿಗೆ 2 ಗಂಟೆ ಬೇಕು. ಇನ್ನು 6 ಗಂಟೆ  ಮಾತ್ರ ಚಿತ್ರೀಕರಣಕ್ಕೆ ಲಭ್ಯ ಇರ್ತೀನಿ ಅಂದಿದ್ದರಂತೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮೊದಲೇ ರಾಕ್ಷಸನಂತೆ ಕೆಲಸ ಮಾಡೋ ಫಿಲಂ ಮೇಕರ್.  ದೀಪಿಕಾ ಹಾಕಿರೋ ಕಂಡೀಷನ್ಸ್ ಕೇಳಿ ಹೀಗೆಲ್ಲಾ ಆದ್ರೆ ಸಿನಿಮ ಮಾಡೋದೇ ಸಾಧ್ಯವಿಲ್ಲ ಅಂದುಕೊಂಡು ಸಂದೀಪ್ ರೆಡ್ಡಿ ವಂಗಾ ಚಿತ್ರದಿಂದ ದಿಪೀಕಾಗೆ ಗೇಟ್ ಪಾಸ್ ಕೊಟ್ರಂತೆ. ಇನ್ನೂ ದೀಪಿಕಾಗೆ ಗೇಟ್​ಪಾಸ್ ಕೊಡೋದ್ರ ಜೊತೆಗೆ ಅಷ್ಟೇ ವೇಗದಲ್ಲಿ ಸಿನಿಮಾಗೆ ಹೊಸ ನಾಯಕಿಯನ್ನೂ ಫಿಕ್ಸ್ ಮಾಡಿದ್ದಾರೆ. ದೀಪಿಕಾ ಧೀಮಾಕಿನಿಂದ ಕಳೆದುಕೊಂಡ ಪಾತ್ರವನ್ನ ಗಿಟ್ಟಿಸಿಕೊಂಡಿರೋದು ರುಕ್ಮಿಣಿ ವಸಂತ್.

ಹೌದು ಸಪ್ತಸಾಗರದಾಚೆ ಎಲ್ಲೋ ನಂತರ ರುಕ್ಮಿಣಿ ತಮಿಳು, ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರುಕ್ಮಿಣಿ ವಸಂತ್ ಕೈಯಲ್ಲಿ ವಿಜಯ್ ಸೇಥುಪತಿ ನಟನೆಯ ಏಸ್ ಮತ್ತು ಶಿವಕಾರ್ತಿಕೇಯನ್ ನಟನೆಯ ಮದ್ರಾಸಿ ಚಿತ್ರಗಳಿವೆ. ಇವುಗಳ ಜೊತೆಗೆ ಈಗ ಪ್ರಭಾಸ್ ನಟನೆಯ ಸಿನಿಮಾಗೆ ನಾಯಕಿಯಾಗೋ ಗೋಲ್ಡನ್ ಚಾನ್ಸ್ ಸಿಕ್ಕಿದೆ.

ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬೀನೇಷನ್ ಮೂವಿ ಅಂದ್ರೆ ಅದು ಸಾವಿರಾರು ಕೋಟಿ ಲೂಟಿ ಮಾಡೋದು ಫಿಕ್ಸ್ ಅಂತ ಈಗಾಗಲೇ ಸಿನಿ ಪಂಡಿತರು ಭವಿಷ್ಯ ನುಡಿದಿದ್ದಾರೆ. ಅಂಥಾ ಬಿಗ್ ಮೂವಿಯಲ್ಲಿ ನಾಯಕಿಯಾಗೋ ಚಾನ್ಸ್ ಸಿಕ್ಕಿರೋದು ನಿಜಕ್ಕೂ ರುಕ್ಕು ಲಕ್ಕು ಅಂದ್ರೆ ತಪ್ಪಾಗಲ್ಲ.

ಒಟ್ಬಲ್ಲಿ ದೀಪಿಕಾ ಧಿಮಾಕು ಮಾಡಿ  ಕಳೆದುಕೊಂಡ ಅವಕಾಶ ಈಗ ಮತ್ತೊಬ್ಬ ಕನ್ನಡತಿ ರುಕ್ಮಿಣಿ ಪಾಲಾಗಿದೆ. ಈ ಪ್ರಾಜೆಕ್ಟ್​​ನಿಂದ ಖಂಡಿತ ರುಕ್ಮಿಣಿ ಪ್ಯಾನ್ ಇಂಡಿಯಾ ಸ್ಟಾರ್ ಆಗೋದ್ರಲ್ಲಿ ಡೌಟೇ ಇಲ್ಲ. ರಶ್ಮಿಕಾ ಬಳಿಕ ಆ ಸ್ಥಾನಕ್ಕೆ ರುಕ್ಕು ಬಂದ್ರೂ ಅಚ್ಚರಿಯಿಲ್ಲ ಅಂತಿದಾರೆ ಸಿನಿ ಪಂಡಿತರು.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more