ಸೂಪರ್​ ಜೋಡಿಯ ಫ್ಯೂಚರ್ ಹೇಗಿರುತ್ತೆ ಸ್ವಾಮಿ..? ವಿಜಯ್-ರಶ್ಮಿಕಾರ ಭವಿಷ್ಯ ನುಡಿದ ವೇಣುಸ್ವಾಮಿ!

ಸೂಪರ್​ ಜೋಡಿಯ ಫ್ಯೂಚರ್ ಹೇಗಿರುತ್ತೆ ಸ್ವಾಮಿ..? ವಿಜಯ್-ರಶ್ಮಿಕಾರ ಭವಿಷ್ಯ ನುಡಿದ ವೇಣುಸ್ವಾಮಿ!

Published : Oct 09, 2025, 04:25 PM IST

ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ವಿಷ್ಯ ಈಗ ಸಿನಿಲೋಕದಲ್ಲಿ ಹಾಟ್ ಟಾಪಿಕ್. ಆದ್ರೆ ಎಂಗೇಜ್​ಮೆಂಟ್ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ ಆಗಿದ್ದನ್ನ ನೋಡಿ ಫ್ಯಾನ್ಸ್ ಆತಂಕಿತರಾಗಿದ್ರು.

ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ವಿಷ್ಯ ಈಗ ಸಿನಿಲೋಕದಲ್ಲಿ ಹಾಟ್ ಟಾಪಿಕ್. ಆದ್ರೆ ಎಂಗೇಜ್​ಮೆಂಟ್ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ ಆಗಿದ್ದನ್ನ ನೋಡಿ ಫ್ಯಾನ್ಸ್ ಆತಂಕಿತರಾಗಿದ್ರು. ಈ ನಡುವೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ ಈ ಜೋಡಿ ಬಗ್ಗೆ  ಭವಿಷ್ಯ ನುಡಿದಿದ್ದಾರೆ. ಏನುದು ಜ್ಯೋತಿಷಿ ಹೇಳಿದ ಭವಿಷ್ಯ ಈ ಸ್ಟೋರಿ ನೋಡಿ. ಯೆಸ್ ವಿಜಯ್ ದೇವರಕೊಂಡ ಅಂಡ್ ರಶ್ಮಿಕಾ ಕಳೆದ 7 ವರ್ಷಗಳಿಂದಲೂ ಸಿನಿಲೋಕದಲ್ಲಿ ಲವ್ ಬರ್ಡ್ಸ್ ಅನ್ನಿಸಿಕೊಂಡಿದ್ರು. ಇಷ್ಟು ದಿನ ಕದ್ದು ಮುಚ್ಚಿ ಡೇಟಿಂಗ್ ಮಾಡ್ತಾ ಇದ್ದ ಈ ಜೋಡಿ ಕಳೆದ ವಾರ ಕುಟುಂಬದಸ್ಥರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಲವ್ ಗಾಸಿಪ್ ಶುರುವಾಗಿ 7 ವರ್ಷಗಳೇ ಆದವು.

ಗೀತಗೋವಿಂದಂ ಸೆಟ್​ನಲ್ಲಿ ಮೀಟ್ ಆದ ಈ ಜೋಡಿ ಮುಂದೇ ಡೇಟ್ ಮಾಡೋದಕ್ಕೆ ಶುರುಮಾಡಿದ್ರು. ಇದೀಗ ಇವರ ನಂಟಿಗೆ ಅಧಿಕೃತ ಮುದ್ರೆ ಬಿದ್ದಿದೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರೋ ಜೋಡಿ ಫೆಬ್ರುವರಿಯಲ್ಲಿ ಮದುವೆಯಾಗಲಿದೆ. ಯೆಸ್ ತೆಲುಗು ಸಿನಿರಂಗದಲ್ಲಿ ವೇಣುಸ್ವಾಮಿ ಶ್ಯಾನೇ ಫೇಮಸ್. ಅಸಲಿಗೆ ಈತ ಮೊದಲು ಚಾನೆಲ್​ಗಳಲ್ಲಿ ಭವಿಷ್ಯ ಹೇಳ್ತಾ ಇದ್ದ. ಈತನ ಭವಿಷ್ಯವನ್ನ ಯಾರೂ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದ್ರೆ ಟಾಲಿವುಡ್​ನ ತಾರಾಜೋಡಿ ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಆಗುತ್ತೆ ಅಂತ ಈತ ಭವಿಷ್ಯ ನುಡಿದಿದ್ದ. ಟಾಲಿವುಡ್​​ನ ಈ ಲವ್ಲಿ ಕಪಲ್ ಬೇರೆ ಯಾಗ್ತಾರೆ ಅಂತ ಯಾರೂ ನಂಬೋದಕ್ಕೆ ರೆಡಿ ಇರಲಿಲ್ಲ. ಪ್ರೀತಿಸಿ ಮದುವೆ ಆದ ಈ ಜೋಡಿ ಅತ್ಯಂತ ಅನ್ಯೋನ್ಯವಾಗಿ ಇತ್ತು. ಆದ್ರೆ ಅಚ್ಚರಿ ಅಂದ್ರೆ 2021ರಲ್ಲಿ ಈ ಜೋಡಿ ಡಿವೋರ್ಸ್​ಗೆ ಅಪ್ಲೈ ಮಾಡ್ತು.

ಚೈತನ್ಯ-ಸಮಂತಾ ವಿಚಾರದಲ್ಲಿ ವೇಣುಸ್ವಾಮಿ ಭವಿಷ್ಯ ನಿಜವಾದದನ್ನ ನೋಡಿ ಜನ ಈತನನ್ನ  ನಂಬೋದಕ್ಕೆ ಶುರುಮಾಡಿದ್ರು. ಅದೇನು ಕಾಕತಾಳೀಯವೋ ಏನೋ ಈತ ನುಡಿದ ಕೆಲ ಭವಿಷ್ಯಗಳು ನಿಜವಾದವು. ಸೆಲೆಬ್ರಿಟಿಗಳು ಈತನನ್ನ ನಂಬೋದಕ್ಕೆ ಶುರುಮಾಡಿದ್ರು. ಹೌದು ರಶ್ಮಿಕಾ ಟಾಲಿವುಡ್​ಗೆ ಎಂಟ್ರಿ ಕೊಟ್ಟ ಸಮಯದಲ್ಲೇ ಇದೇ ವೇಣುಸ್ವಾಮಿ ಬಳಿ  ಹೋಗಿ ‘ರಾಜಶ್ಯಾಮಲ' ಪೂಜೆ ಮಾಡಿಸಿದ್ರು. ಸೋಷಿಯಲ್ ಮಿಡಿಯಾದಲ್ಲಿ ಆ ಪೂಜೆಯ ವಿಡಿಯೋಸ್ ವೈರಲ್ ಆಗಿದ್ವು. ಟಾಲಿವುಡ್​ನಲ್ಲಿ ಸೂಪರ್ ಸಕ್ಸಸ್ ಕಂಡ ರಶ್ಮಿಕಾ ಮುಂದೆ ಬಾಲಿವುಡ್​ನಲ್ಲೂ ಕ್ವೀನ್ ಆದ್ರು. ನ್ಯಾಷನಲ್ ಕ್ರಶ್ ಪಟ್ಟ ಪಡೆದ್ರು. ರಶ್ಮಿಕಾಳ ಈ ಯಶಸ್ಸಿಗೆ ತಾನು ಪೂಜೆ ಮಾಡಿಸಿದ್ದೇ ಕಾರಣ ಅಂತ ವೇಣುಸ್ವಾಮಿ ಎಲ್ಲೆಡೆ ಪ್ರಚಾರ ಗಿಟ್ಟಿಸಿದ್ದ.

ಹೌದು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಬಗ್ಗೆ ಗಾಸಿಪ್ ಹರಿದಾಡ್ತಾ ಇದ್ದ ಟೈಂನಲ್ಲಿ ಆ ಬಗ್ಗೆಯೂ ವೇಣುಸ್ವಾಮಿ ಭವಿಷ್ಯ ನುಡಿದಿದ್ದ. ಇವರಿಬ್ಬರೂ ಎಂಗೇಜ್​ಮೆಂಟ್ ಮಾಡಿಕೊಳ್ತಾರೆ ಅಂದಿದ್ದ. ಇದೀಗ ವಿಜಯ್-ರಶ್ಮಿಕಾ ಎಂಗೇಜ್ ಆಗಿದ್ದಾರೆ.  ಅವರು ಒಂದಾಗ್ತಾರೆ ಅಂತ ಹೇಳಿರೋ ಈ ಸ್ವಾಮಿ, ಅವರಿಗೆ ದೂರವಾಗೋ ಯೋಗ ಇದೆ.. ಕಂಟಕ ಇದೆ ಅಂತಲೂ ಹೇಳಿದ್ದಾನೆ. ಅದು ಸರಿಹೋಗಬೇಕು ಅಂದರೆ ತನ್ನ ಬಳಿ ಬಂದು ಪೂಜೆ ಮಾಡಿಸಬೇಕು ಅಂತಾನೂ ಪ್ರಮೋಷನ್ ಶುರುಮಾಡಿದ್ದಾನೆ. ಹಿಂದೊಮ್ಮೆ ಇವನ ಬಳಿ ಹೋಗಿ ಪೂಜೆ ಮಾಡಿಸಿದ್ದ ರಶ್ಮಿಕಾ ಮತ್ತೆ ಈತನ ಮೊರೆ ಹೋಗ್ತಾರೆ. ಅಥವಾ ಇವನೊಬ್ಬ ನಕಲಿ ಜ್ಯೋತಿಷಿ ಅಂತ ದೂರವಿಡ್ತಾರಾ ಗೊತ್ತಿಲ್ಲ... ಒಟ್ನಲ್ಲಿ ಈ ಸ್ಟಾರ್ ಜೋಡಿ ಬಗ್ಗೆ ಈ ಸೆಲೆಬ್ರಿಟಿ ಜ್ಯೋತಿಷಿ ಚಿತ್ರವಿಚಿತ್ರ ಭವಿಷ್ಯ ಹೇಳಿ ಫ್ಯಾನ್ಸ್​ಗೆ ಟೆನ್ಶನ್ ಕೊಡ್ತಾ ಇದ್ದಾನೆ.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more