Dec 2, 2024, 2:20 PM IST
ಪುಷ್ಪ-2 ಸಿನಿಮಾ ರಿಲೀಸ್ಗೆ ಇನ್ನು ನಾಲ್ಕೇ ದಿನ ಬಾಕಿ. ಈ ಸಿನಿಮಾದ ಕ್ರೇಜ್ ಅದ್ಯಾಪರಿ ಇದೆ ಅಂದ್ರೆ ಅಡ್ವಾನ್ಸ್ ಬುಕ್ಕಿಂಗ್ ನಲ್ಲೇ ದಾಖಲೆ ನಿರ್ಮಾಣ ಆಗಿದೆ. ವಿಶ್ವದಾದ್ಯಂತ ಭರ್ತಿ 12 ಸಾವಿರ ಸ್ಕ್ರೀನ್ಗಳಲ್ಲಿ ಪುಷ್ಪ-2 ತೆರೆಗೆ ಬರ್ತಾ ಇದ್ದು, ಇಂಡಿಯನ್ ಸಿನಿ ಇಂಡಸ್ಟ್ರಿಯ ಹಳೆಯ ದಾಖಲೆಗಳನ್ನೆಲ್ಲಾ ಈ ಸಿನಿಮಾ ಧೂಳಿಪಟ ಮಾಡೋ ಸಾಧ್ಯತೆ ದಟ್ಟವಾಗಿದೆ.ಬೇಡಿಕೆಗೆ ತಕ್ಕಂತೆ ಪುಷ್ಪ-2 ದೊಡ್ಡ ಮಟ್ಟದಲ್ಲಿ ರಿಲೀಸ್ ಆಗ್ತಾ ಇದೆ. ಭಾರತದಾದ್ಯಂತ 8 ಸಾವಿರ ಹಾಗೂ ವಿದೇಶಗಳಲ್ಲಿ 4 ಸಾವಿರ ಸೇರಿದಂತೆ ವರ್ಲ್ಡ್ ವೈಡ್ ಒಟ್ಟು 12 ಸಾವಿರ ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಕಾಣ್ತಾ ಇದೆ. ಇಷ್ಟು ಸ್ಕ್ರೀನ್ ಗಳಲ್ಲಿ ರಿಲೀಸ್ ಆದ ಮೇಲೆ ಕಲೆಕ್ಷನ್ ನಲ್ಲೂ ಪುಷ್ಪ ರೆಕಾರ್ಡ್ ಮಾಡೋದು ಫಿಕ್ಸ್. ಇಷ್ಟು ಸ್ಕ್ರೀನ್ಸ್ ಮೊದಲ ದಿನ ಹೌಸ್ ಫುಲ್ ಆದ್ರೆ ಮೊದಲ ದಿನವೇ ಪುಷ್ಪ-2 300 ಕೋಟಿ ಗಳಿಕೆ ಮಾಡೋದು ಫಿಕ್ಸ್ ಎನ್ನಲಾಗ್ತಾ ಇದೆ.