Nov 5, 2022, 4:30 PM IST
ಬಾಲಿವುಡ್ ಸ್ಟಾಕ್ ಜೋಡಿ, ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಾಂಪತ್ಯದಲ್ಲಿ ಬಿರುಕು ಮೂಡಿದೆ, ವಿಚ್ಛೇದನಕ್ಕೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳ ಹಿಂದೆ ವೈರಲ್ ಆಗಿತ್ತು. ಆದರೀಗ ಈ ಸುದ್ದಿಗೆ ಬ್ರೇಕ್ ಹಾಕಿದ್ದಾರೆ ಸ್ಟಾರ್ ಜೋಡಿ. ಇಬ್ಬರ ರೊಮ್ಯಂಟಿಕ್ ಫೋಟೋಗಳು ಎಲ್ಲಾ ವದಂತಿಯನ್ನು ತಳ್ಳಿ ಹಾಕಿದೆ. ಹೌದು ದೀಪಿಕಾ ಮತ್ತು ರಣ್ವೀರ್ ಸಿಂಗ್ ಇಬ್ಬರೂ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಣ್ವೀರ್ ಸಿಂಗ್ ಪತ್ನಿಯ ಫೋಟೋ ಶೇರ್ ಮಾಡಿ ಕ್ಯೂಟಿ ಎಂದು ಬರೆದುಕೊಂಡಿದ್ದಾರೆ. ಹಾಗೂ ಕಿಸ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.