Jul 30, 2022, 2:37 PM IST
ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಮತ್ತು ದೀಪಿಕಾ ದಂಪತಿ ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮಿಜ್ವಾನ್ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಈಶೋ ನಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. 2022ನೇ ಮಿಜ್ವಾನ್ ಫ್ಯಾಷನ್ ಶೋ ಇದಾಗಿದ್ದು ಈ ಬಾರಿ ದೀಪಿಕಾ ಮತ್ತು ರಣವೀರ್ ಸಿಂಗ್ ಮಿಂಚಿದ್ದಾರೆ. ರ್ಯಾಂಪ್ ವಾಕ್ ಮಾಡಿದ ದೀಪ್ ವೀರ್ ದಂಪತಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ರಣವೀರ್ ಮತ್ತು ದೀಪಿಕಾ ಡ್ರೆಸ್ ವೈರಲ್ ಆಗಿದೆ. ರಾಯಲ್ ಲುಕ್ ನಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ. ರಣವೀರ್ ಸಿಂಗ್ ಗ್ರ್ಯಾಂಡ್ ಶೇರ್ವಾನಿಯಲ್ಲಿ ಮಿಂಚಿದ್ರೆ ನಟಿ ದೀಪಿಕಾ ಲೆಹಂಗಾದಲ್ಲಿ ಮಿಂಚಿದರು. ರಣವೀರ್ ಸಿಂಗ್ ಪತ್ನಿ ದೀಪಿಕಾಗೆ ಕಿಸ್ ಮಾಡಿ ಪ್ರೀತಿ ವ್ಯಕ್ತಪಡಿಸಿದರು.