ಚೆನೈನಲ್ಲಿ ಬಾಳೆ ಎಲೆ ಊಟ ಮಾಡಿದ ರಣಬೀರ್ ಕಪೂರ್; ನಾಗಾರ್ಜುನ, ರಾಜಮೌಳಿ ಸಾಥ್

Aug 26, 2022, 3:19 PM IST

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ  ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ಅಯಾನ್ ಮುಖರ್ಜಿ ನಿರ್ದೇಶನ ಮಾಡಿರೋ ಈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿರೋ ರಣಬೀರ್ ಇತ್ತಿಚಿಗಷ್ಟೇ ಚೆನೈಗೆ ಭೇಟಿ ನೀಡಿದ್ರು. ಇದೇ ಸಮಯದಲ್ಲಿ ರಣಬೀರ್ ಕಪೂರ್ , ನಾಗಾರ್ಜುನ್ ಹಾಗೂ ರಾಜಮೌಳಿ ಅವರು ಸೌತ್ ಇಂಡಿಯಾದ ಸಂಪ್ರಾದಾಯಿಕ ಬಾಳೆಎಲೆ ಊಟ ಸವಿದಿದ್ದಾರೆ. ನಟಿ ಸಮೀರಾ ರೆಡ್ಡಿ ತಮ್ಮ ಬೇಬಿ ಬಂಪ್ ಫೋಟೋ ಶೂಟ್ ನಿಂದ ಸಖತ್ ಸುದ್ದಿಯಾಗಿದ್ರು. ಈಗ ಮತ್ತೆ ಅದೇ ಫೋಟೋ ಶೂಟ್ ನ ಮೇಕಿಂಗ್ ರಿಲೀಸ್ ಮಾಡಿದ್ದಾರೆ ಸಮೀರಾ.  ಗಣೇಶ್ ಹಬ್ಬ ಸಮೀಪವಾಗುತ್ತಿದಂತೆ ಅಪ್ಪು ಜೊತೆ ಇರೋ ಗಣೇಶನ ಮೂರ್ತಿಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಅಪ್ಪು ಇಲ್ಲದೆ 10 ತಿಂಗಳು ಕಳೆದಿದ್ದು ಪುನೀತ್ ಅವರನ್ನ ದೇವರಂತೆಯೇ ಕಾಣುತ್ತಿದ್ದಾರೆ ಅಭಿಮಾನಿಗಳು. ಹಾಗಾಗಿ ಈಗ ಗಣೇಶನ ಜೊತೆಯಲ್ಲಿ ಅಪ್ಪು ಮೂರ್ತಿ ಇದ್ದರೆ ಚೆಂದ ಅನ್ನೋದು ಅಭಿಮಾನಿಗಳ ಆಸೆ.